
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 4 :- ಕಳೆದ ನಾಲ್ಕೈದು ದಿನದಿಂದ ತಾಲೂಕಿನ ದೊಡ್ಡ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 30ಕ್ಕೂ ಹೆಚ್ಚು ಮಂದಿ ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದು ಆರೋಗ್ಯ ಇಲಾಖೆ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದು ಅಲ್ಲದೆ ಹೊಡೆದ ಪೈಪ್ ಲೈನ್ ಸರಿಪಡಿಸುವುದಲ್ಲದೆ ಪ್ರಕರಣವೂ ವಿಜಯನಗರ ಜಿಲ್ಲೆಯ ಜಿಲ್ಲಾಡಳಿತದ ನಿದ್ದೆಗೆಡಿಸಿದೆ.
ಈಗಾಗಲೇ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಸೇರಿದಂತೆ ವಿಜಯನಗರ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸದಾಶಿವ ಪ್ರಭು, ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಸರ್ವೇಕ್ಷಾಣಾಧಿಕಾರಿ ಡಾ ಷಣ್ಮುಖನಾಯ್ಕ್,
ಕೂಡ್ಲಿಗಿ ತಹಸೀಲ್ದಾರ್ ಟಿ ಜಗದೀಶ್, ಇಓ ರವಿಕುಮಾರ, ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿ ಡಾ ಪ್ರದೀಪ, ಬಡೇಲಡಕು ಗ್ರಾಮಪಂಚಾಯಿತಿ ಅಧ್ಯಕ್ಷ ಮಂಜುಳ ಸತೀಶ್ ಹಾಗೂ ಸದಸ್ಯರು, ಪಿಡಿಓ ವಸಂತನಾಯ್ಕ್ ಆರೋಗ್ಯ ಇಲಾಖೆಯ ಹಿರಿಯ ನಿರೀಕ್ಷಿಕ ಜಗದೀಶ ಹಾಗೂ ಇತರೆ ಅಧಿಕಾರಿಗಳು ದಿನಾಲೂ ದೊಡ್ಡಗೊಲ್ಲರಹಟ್ಟಿಯ ಜನತೆಯ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ದಾಖಲಾದಂತೆ ಜೂನ್ 30ರಂದು 3 ವಾಂತಿ ಭೇದಿ ಪ್ರಕರಣದಿಂದ ಆರಂಭವಾಗಿ ನಿನ್ನೆವರೆಗೂ ಒಟ್ಟು 30ಕ್ಕೂ ಹೆಚ್ಚು ಪ್ರಕರಣ ಕಂಡು ಬಂದಿವೆ ಆದರೆ ನಿನ್ನೆಯಿಂದ ಇಲ್ಲಿಯವರೆಗೂ ಯಾವುದೇ ಪ್ರಕರಣ ಕಂಡುಬಂದಿಲ್ಲವಾಗಿದ್ದು ತುಸು ನೆಮ್ಮದಿ ತಂದಿದೆ ಎಂದು ಹೇಳಬಹುದಾಗಿದೆ.ದಿನಾಲೂ ಅಧಿಕಾರಿ ಹಾಗೂ ಜನಪ್ರತಿನಿದಿಗಳು ಗ್ರಾಮದ ಜನತೆಯಲ್ಲಿ ಸ್ವಚ್ಛತೆ ಅರಿವು ಹಾಗೂ ಶುದ್ಧಕುಡಿಯುವ ನೀರಿನ ಮತ್ತು ಕಾದಾರಿದ ನೀರಿನ ಬಳಕೆ ಬಗ್ಗೆ ತಿಳಿಹೇಳುತ್ತಿದ್ದಾರೆ ಅಲ್ಲದೆ ಈಗಾಗಲೇ ಜಿ ಪಂ ಸಿಇಓ ಎರಡಮೂರು ಬಾರಿ ಭೇಟಿ ನೀಡಿದ್ದು ಖುದ್ದಾಗಿ ನಿಂತು ಗ್ರಾಮದಲ್ಲಿ ಸ್ವಚ್ಛತೆ ಅರಿವು ಹಾಗೂ ಶೌಚಾಲಯ ಸ್ವಚ್ಛತೆ ಇಟ್ಟುಕೊಳ್ಳುವಂತೆ ಮನೆಮನೆಗೆ ಭೇಟಿ ನೀಡಿ ಸ್ವಚ್ಛತೆ ಗೊಳಿಸುವ ನಿಟ್ಟಿನಲ್ಲಿ ಪ್ರಕರಣವನ್ನು ನಿಯಂತ್ರಣಕ್ಕೆ ತರುವಲ್ಲಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ದುರಸ್ಥಿ ಪೈಪ್ ಲೈನ್ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಹೇಳಲಾಗುತ್ತಿದೆ ಒಟ್ಟಿನಲ್ಲಿ ದೊಡ್ಡಗೊಲ್ಲರಹಟ್ಟಿಯ ವಾಂತಿ ಭೇದಿ ಪ್ರಕರಣ ವಿಜಯನಗರ ಜಿಲ್ಲೆಯ ಜಿಲ್ಲಾಡಳಿತದ ನಿದ್ದೆಗೆಡಿಸಿದ್ದು ಈ ಶ್ರಮದಿಂದ ಪ್ರಕರಣ ನಿಯಂತ್ರಣಕ್ಕೆ ತಲುಪುವ ಲಕ್ಷಣ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ.