ಸಂಜೆವಾಣಿ ವಾರ್ತೆ
ಕುಕನೂರ,ಜೂ,16- ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ತಹಶೀಲ್ದಾರ ನೀಲಪ್ರಭಾ ಬಬಲದ್ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರನ್ನು ನಿಯಮಿತವಾಗಿ ಒದಗಿಸುವ ಬಗ್ಗೆ ಸಭೆ ನಡೆಸಿದರು.
ಕುಕನೂರ ತಾಲೂಕಿನ ಕೆಲವು ಗ್ರಾಮಗಳಲ್ಲಿ ವಾಂತಿ ಭೇದಿ ಪ್ರಕರಣಗಳು ಕಂಡುಬಂದಿದ್ದು, ಹಾಗೂ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಸಾವುಗಳು ಸಂಭವಿಸಿದ್ದು, ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೀರಿನ ಮೂಲಗಳನ್ನು ಪರೀಕ್ಷಿಸಿಯೇ ಜನರಿಗೆ ನೀಡಬೇಕು, ಅದರಲ್ಲಿ ಕುಡಿಯುವ ನೀರನ್ನುಶುದ್ದ ಕುಡಿಯುವ ನೀರಿನ ಘಟಕದಿಂದ ತೆಗೆದುಕೊಂಡು ಹೋಗಲು ಸ್ವಚ್ಚ ವಾಹಿನಿಯ ಮೂಲಕ ಪ್ರಚಾರ ಮಾಡಬೇಕು. ಕುಡಿಯುವ ನೀರಿನ ಮೂಲದ ಹತ್ತಿರ ಕಸ ಹಾಗೂ ಚರಂಡಿ ಇದ್ದರೆ ಅವುಗಳನ್ನು ಕ್ಲೀನ್ ಮಾಡಬೇಕು ಎಂದರು.
ನಂತರ ಸಹಾಯಕ ನಿರ್ದೇಶಕರು ಪಂಚಾಯತ್ ರಾಜ್ ತಾಲೂಕ ಪಂಚಾಯತ್ ಕುಕನೂರ ವೆಂಕಟೇಶ್ ವಂದಾಲ್ ರವರು ಮಾತನಾಡಿ ದೂರದೃಷ್ಠಿಯೋಜನೆಯ ತಯಾರಿಕೆ ಪ್ರಕ್ರಿಯೆಯನ್ನು ಜೂನ್ ಅಂತ್ಯದೊಳಗಾಗಿ ಮುಕ್ತಾಯ ಮಾಡಬೇಕು, ಕರ ವಸೂಲಿಯನ್ನು POS ಮಸೀನ್ ನಿಂದ ಸಂಗ್ರಹಿಸಬೇಕು, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯ ಹೊಂದಿಲ್ಲದ ಕುಟುಂಬಗಳನ್ನು ಸರ್ವೆ ಮಾಡಿ ಪಟ್ಟಿ ಮಾಡಬೇಕು, ಸಮುದಾಯ ಶೌಚಾಲಯಗಳನ್ನು ಶೀರ್ಘವಾಗಿ ಅನುಷ್ಠಾನ ಮಾಡಲು ಕ್ರಮ ವಹಿಸಬೇಕು ಎಂದರು. ಸಭೆಯಲ್ಲಿ
ಉಪ ತಹಶೀಲ್ದಾರರಾದ ಮುರಳೀಧರ್ ಕುಲಕರ್ಣಿ, ತಾಲೂಕಾ ಯೋಜನಾಧಿಕಾರಿಗಳಾದ ಆನಂದ ಗರೂರ್ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ವಿಷಯ ನಿರ್ವಾಹಕರು, ನರೇಗಾ ಸಿಬ್ಬಂದಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಜರಿದ್ದರು.