
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.14: ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಸಾರ್ವಜನಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಾಂತಿ-ಭೇದಿಯಿಂದ ಏಳು ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಟ್ಟಣದ 7ನೇ ವಾರ್ಡಿನ ಅಕ್ಟರ್ ಜಿ (20) ಹೊನ್ನೂ ವಲಿ ಎಂ(18) ನೂರಮ್ಮ.ಜಿ (68) ಹಾಗೂ ಬಲಕುಂದಿ ಗ್ರಾಮದ ರತ್ನಮ್ಮ (44) ಸೇರಿದಂತೆ 7 ಮಂದಿ ದಾಖಲಾಗಿದ್ದರೆ.
ಬಲಕುಂದಿ ಗ್ರಾಮದ ಗಂಗಮ್ಮ ಮಾತನಾಡಿ ಗ್ರಾಮ ಪಂಚಾಯಿತಿಯವರು ನೀರನ್ನು ಸರಬರಾಜು ಮಾಡುತ್ತಿಲ್ಲ, ಅದಕ್ಕೆ ನಾವು ಅನಿವಾರ್ಯವಾಗಿ ಕೆರೆಯಲ್ಲಿ ನಿಂತ ಮಳೆ ನೀರು ಕುಡಿಯಬೇಕಾಗಿದೆ ಎಂದು ಹೇಳಿದರು.
ಕಲುಷಿತ ನೀರು ಅಥವಾ ಆಹಾರದಲ್ಲಿ ವ್ಯತ್ಯಾಸದ ಪರಿಣಾಮ ಬೆಳಿಗ್ಗೆ 4 ಮತ್ತು ಸಂಜೆ 3 ವಾಂತಿಭೇದಿ ಪ್ರಕರಣ ದಾಖಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರಾದ ಡಾ.ಗೌತಮಿ ತಿಳಿಸಿದರು.
ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಹತ್ತು ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಕಾದಾರಿಸಿದ ನೀರನ್ನು ಕುಡಿಯುವಂತೆ ಡಂಗೂರ ಸಾರಿಸಲಾಗಿದೆ. ನೀರಿನ ಶುದ್ಧತೆ ಕುರಿತಂತೆ ಪರೀಕ್ಷೆಗೆ ಕಳುಹಿಸಿದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಬಿ. ಈರಣ್ಣ ತಿಳಿಸಿದರು.