ವಾಂಕೋವರ್‌ನಲ್ಲಿ ಹಲವರಿಗೆ ಇರಿತ: ಆರೋಪಿ ಬಂಧನ

ವಾಂಕೋವರ್, ಮಾ.೨೮- ವ್ಯಕ್ತಿಯೊಬ್ಬ ತನ್ನ ಕೈಗೆ ಸಿಕ್ಕ ಹಲವರಿಗೆ ಚೂರಿಯಿಂದ ಇರಿದ ಘಟನೆ ಉತ್ತರ ವಾಂಕೋವರ್‌ನ ಗ್ರಂಥಾಲಯದಲ್ಲಿ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಅರು ಮಂದಿಗೆ ಗಾಯಗೊಂಡಿದ್ದಾರೆ. ಸದ್ಯ ಆರೋಪಿಯನ್ನು ಅಲ್ಲಿನ ಪೊಲೀಸ್ ಬಂಧಿಸಿದ್ದಾರೆ.
ಗ್ರಂಥಾಲಯದ ಹೊರಗೆ ಹಾಗೂ ಒಳಗಿನ ಇದ್ದ ನಾಗರಿಕರನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮಹಿಳೆ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇಲ್ಲಿನ ಪೊಲೀಸ್ ಮೂಲಗಳ ಪ್ರಕಾರ ಕೃತ್ಯ ನಡೆಸಿದ ಆರೋಪಿ ೨೦ರ ಹರೆಯದವನಾಗಿದ್ದು, ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಯುವಕ ಸಿಕ್ಕ ಸಿಕ್ಕ ಕಡೆಗಳಲ್ಲಿ ಓಡಿ, ತನ್ನ ಹಾದಿಯಲ್ಲಿ ಸಿಗುವ ಎಲ್ಲರಿಗೂ ಚೂರಿಯಿಂದ ಇರಿದು ಓಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.