ವಸತಿ ಹಗರಣದಲ್ಲಿ ಪಾಲ್ಗೊಂಡವರ ವಿರುದ್ಧ ಕ್ರಮಕ್ಕೆ ಬಿಜೆಪಿ ಒತ್ತಾಯ

ಬೀದರ:ನ.6: ಭಾಲ್ಕಿ ತಾಲೂಕಿನಲ್ಲಿ 2015-16 ರಿಂದ 2018-19 ರವರೆಗೆ ನಡೆದ ವಸತಿ ಹಗರಣ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಭಗವಂತ ಖೂಬಾ ಮತ್ತು ಬಿಜೆಪಿ ಮುಖಂಡರು ಇಲ್ಲಿ ಗುರುವಾರ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅವರಿಗೆ ಒತ್ತಾಯಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಅವರು ಮನವಿ ಪತ್ರದ ಪ್ರತಿಯನ್ನು ಅವರು ಬಳಿಕ ಪತ್ರಿಕೆಗಳಿಗೆ ಬಿಡುಗಡೆ ಮಾಡಿದ್ದಾರೆ. ಸಂಸದ ಭಗವಂತ ಖೂಬಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳ್ಕರ್, ಬಿಜೆಪಿ ಮುಖಂಡರಾದ ಡಿ.ಕೆ.ಸಿದ್ರಾಮ, ಈಶ್ವರ್ ಸಿಂಗ್ ಠಾಕೂರ್ ಮತ್ತು ಮಲ್ಲಿಕಾರ್ಜುನ್ ಕುಂಬಾರ್ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ. ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಅನುಷ್ಠಾನದಲ್ಲಿ 91 ಕೋಟಿ ರೂಪಾಯಿ ಅವ್ಯವಹರವಾಗಿದೆ ಎಂದು ರಾಜೀವಗಾಂಧಿ ವಸತಿ ನಿಗಮ ತಮಗೆ ಹಾಗೂ ಸಿ.ಇ.ಓ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಿದೆ. ವರದಿಯನ್ನು ಪರಿಗಣಿಸಿ, ಈ ಹಗರಣದಲ್ಲಿ ಪ್ರತ್ಯೆಕ್ಷ ಮತ್ತು ಪರೋಕ್ಷವಾಗಿ ಪಾಲ್ಗೊಂಡಿರುವವರ ವಿರುದ್ಧ ಕ್ರಮಕೈಗೊಂಡು ಬಡವರಿಗೆ ನ್ಯಾಯ ಒದಗಿಸಬೇಕಾಗಿರುವಂತೆ ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಭಾಲ್ಕಿ ತಾಲೂಕಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಅವ್ಯವಹಾರ ನಡೆದಿರುತ್ತದೆ. ರಾಜೀವಗಾಂಧಿ ವಸತಿ ನಿಗಮದ ಅಧಿಕಾರಿಗಳು ಭಾಲಿ ್ಕ ತಾಲೂಕಿನಲಿ ್ಲತನಿಖೆ ನಡೆಸಿ, ಸುಮಾರು 9710 ಮನೆಗಳು ಮಾರ್ಗಸೂಚಿಗಳನ್ವಯ ನಿರ್ಮಿಸಿರುವುದಿಲ್ಲಾ ಹಾಗೂ ಒಂದೆ ಮನೆ ಮೇಲೆ ಎರಡೆರಡು ಬಾರಿ ಬಿಲ್ಲುಗಳು ಪಡೆಯಲಾಗಿದೆ, ಒಬ್ಬರಿಗೆ ಎರಡರಿಂದ 3 ಮನೆಗಳು ನೀಡಲಾಗಿದೆ, ಸರ್ಕಾರಿ ನೌಕರರಿಗೂ ಮನೆಗಳು ನೀಡಲಾಗಿದೆ, ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡಗಳಿಗೆ ಸೇರಬೇಕಾದ ವಸತಿಗಳು ಮೇಲ್ಜಾತಿಯವರಿಗೆ ನೀಡಿ, ಹಿಂದೂಳಿದವರಿಗೆ ಅನ್ಯಾಯ ಮಾಡಲಾಗಿದೆ ಒಟ್ಟು 91 ಕೋಟಿ ರೂ. ಅವ್ಯವಹಾರವಾಗಿದೆ ಎಂದು ವರದಿ ನೀಡಿದ್ದಾರೆ ಎಂದು ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಗಿದೆ. ಭಾಲ್ಕಿ ಶಾಸಕರು ಯಾವುದೇ ಅಧಿಕಾರವಿಲ್ಲದಿದ್ದರೂ, ಮಂಜೂರಾತಿ ಪ್ರಮಾಣ ಪತ್ರದ ಮೇಲೆ ತನ್ನ ಭಾವಚಿತ್ರಗಳನ್ನು ಹಾಕಿಕೊಂಡು, ಸ್ವತಃ ಮಾಡಿ ಸಹಿ ಫಲಾನುಭವಿಗಳಿಗೆ ಮಂಜೂರಾತಿ ಹಾಗೂ ಕಾಮಗಾರಿ ಆದೇಶ ಪತ್ರ ನೀಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ. ಈ ಅವ್ಯವಹಾರಗಳ ಹಿಂದೆ ನೇರವಾಗಿ ಭಾಲ್ಕಿ ಶಾಸಕ ಈಶ್ವರಖಂಡ್ರೆ ಭಾಗಿಯಾಗಿರುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ಪಿ.ಡಿ.ಓಗಳ ಮೇಲೆ ಒತ್ತಡ, ನಗರಪ್ರದೇಶದಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಈ ಅಕ್ರಮವೆಸಗಿರುತ್ತಾರೆ ಎಂದು ಮನವಿ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕರು ಮನೆ ಮಂಜೂರಾತಿಯಾಗಿರುವುದಕ್ಕಿಂತ ಹೆಚ್ಚಿನ ಜನರಿಗೆ ಮನೆ ಹಂಚಿಕೆ ಪ್ರಮಾಣ ಪತ್ರ ನೀಡಿದ್ದಾರೆ, ಜನರೆಲ್ಲರೂ ಅವರ ಮಂಜೂರಾತಿ ಪತ್ರದ ಮೇಲೆ ಭರವಸೆ ಮಾಡಿ, ಮನೆ ಕಟ್ಟಿಕೊಂಡಿರುತ್ತಾರೆ, ಆದರೆ ಸದ್ಯ ಅವರೆಲ್ಲರೂ ಕಂಗಾಲಾಗಿದ್ದಾರೆ. ಈ ಬಗ್ಗೆ ಜನರು ಶಾಸಕರಿಗೆ ಕೇಳಿದರೆ, ರಾಜ್ಯ ಸರ್ಕಾರ ದುಡ್ಡು ನೀಡುತ್ತಿಲ್ಲಾವೆಂದು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ, ಈ ಸಂಬಂಧವಾಗಿ ಈಗಾಗಲೆ ಸರ್ಕಾರದಿಂದ ಪಿ.ಡಿ.ಓ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ಸಹ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಿಂದ ಶಾಸಕರಿಗೆ ನೋಟಿಸ್ ನೀಡಿ, ಉತ್ತರ ನೀಡುವಂತೆಕೋರಿದ್ದರು. ಆದರೆ ಶಾಸಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಉತ್ತರ ನೀಡಿರುವುದಿಲ್ಲಾ ಎಂಬ ಖಚಿತ ಮಾಹಿತಿಯಿದೆ. ಶಾಸಕರು, ಭಾಲ್ಕಿ ತಾಲೂಕಿನ, ಅರ್ಹ ಫಲಾನುಭವಿಗಳ ಮನೆಗಳನ್ನು ಜಿ.ಪಿ.ಎಸ್. ಮಾಡದಂತೆ ಪಿ.ಡಿ.ಓಗಳ ಮೇಲೆ ಒತ್ತಡ ಹೇರುತ್ತಿದ್ದಾರೆ, ಈ ವಿಷಯದ ಬಗ್ಗೆ ಮಾನ್ಯ ಸಂಸದರುತಮಗೆ ಮತ್ತು ಸಿ.ಇ.ಓ ಜಿಲ್ಲಾ ಪಂಚಾಯತರವರಿಗೆ ಪತ್ರ ಬರೆದಿರುತ್ತಾರೆ. ಆದರೂ ಅಧಿಕಾರಿಗಳು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಭಾಲ್ಕಿ ತಾಲೂಕಿನ ಬಡಜನರಿಗೆ ಮೋಸ ಮಾಡಿರುವುದಲ್ಲದೆ, ಸದ್ಯ ನಮ್ಮ ಸರ್ಕಾರದ ಹೆಸರು ಹೇಳಿ ಮತ್ತೇ ವಂಚಿಸುತ್ತಿರುವ ಈಶ್ವರ್ ಖಂಡ್ರೆ ವಿರುದ್ಧ ಕ್ರೀಮಿನಲ್ ಪ್ರಕರಣ ದಾಖಲಿಸಿ, ಮಾರ್ಗಸೂಚಿಗಳನ್ವಯ ಮನೆ ನಿರ್ಮಿಸಿಕೊಂಡವರಿಗೆ ಧೈರ್ಯ ತುಂಬುವಂತೆ ಮತು ್ತಅರ್ಹ ಫಲಾನಭವಿಗಳಿಗೆ ತಕ್ಷಣ ಜಿ.ಪಿ.ಎಸ್. ಮಾಡಿಸಿ ಮತ್ತು ಹಣ ಪಾವತಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.