ವಸತಿ ಸಚಿವರನ್ನು ಭೇಟಿ ಮಾಡಿದ ಸಂಸದ ಖುಬಾ

ಬೀದರ,ನ.9- ವಸತಿ ಸಚಿವರಾದ ವಿ.ಸೋಮಣ್ಣಾ ಅವರು, ವಿಶೇಷವಾಗಿ ಜಿಲ್ಲೆಯ ಭಾಲ್ಕಿ ತಾಲೂಕಿಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ವಸತಿ ಯೋಜನೆಯಲ್ಲಿ ಹೆಚ್ಚಿನ ಮನೆಗಳನ್ನು ಮಂಜೂರು ಮಾಡುವುದಾಗಿ ಆಶ್ವಾಸನೆಯನ್ನು ತಮಗೆ ನೀಡಿದ್ದಾರೆ ಎಂದು ಸಂಸದ ಖುಬಾ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವಸತಿ ಸಚಿವರಾದ ವಿ.ಸೋಮಣ್ಣಾ ಅವರನ್ನು ಸಂಸದ ಭಗವಂತ ಖುಬಾ ಅವರು ಭೇಟಿ ಮಾಡಿ, ಬೀದರ ಜಿಲ್ಲೆಯಲ್ಲಿರುವ ಅರ್ಹ ವಸತಿ ಫಲಾನುಭವಿಗಳಿಗೆ ಅವರಕಂತಿನ ಯೋಜನೆಯ ಹಣ ಜಮೆಯಾಗಿವೆ ಹಾಗೂ ಮುಂದೆಯೂ ಆಗುತ್ತವೆ ಎಂಬ ಭರವಸೆಯ ಹಿನ್ನಲೆಯಲ್ಲಿ ಸಚಿವರಿಗೆ ಸಮಸ್ತ ಬೀದರ ಜನತೆಯ ಪರವಾಗಿ ಧನ್ಯವಾದಗಳನ್ನು ಖುಬಾ ಅವರು ಅರ್ಪಿಸಿದರು.
ಪ್ರಯುಕ್ತ ಜಿಲ್ಲೆಯಲ್ಲಿರುವ ಮಾರ್ಗಸೂಚಿಗಳನ್ವಯ ಮನೆ ನಿರ್ಮಿಸಿಕೊಂಡ ವಸತಿ ಫಲಾನುಭವಿಗಳು, ಯಾವೂದೇಕಾರಣಕ್ಕೂ ನಿರಾಸೆಗೊಳ್ಳುವ ಅವಶ್ಯಕತೆಯಿಲ್ಲಾ, ರಾಜು ಬಿಜೆಪಿ ಸರ್ಕಾರ ಅರ್ಹ ಫಲಾನುಭವಿಗಳಿಗೆ ಯೋಜನೆಯ ಅನುದಾನವನ್ನು ನೀಡುತ್ತಿದೆ ಮತ್ತು ಮುಂದೆಯೂ ನೀಡಲಿದೆ ಎಂದು ಸಚಿರುವ ತಿಳಿಸಿದ್ದಾರೆ ಎಂದು ಸಂಸದ ಖುಬಾ ಅವರು ಹೇಳಿದ್ದಾರೆ.