ವಸತಿ ಶಾಲೆ ನೌಕರರ ಸೇವಾ ಸಮಸ್ಯೆಗಳಿಗೆ ಸ್ಪಂದನೆ: ನಮೋಶಿ

ಕಲಬುರಗಿ:ಸೆ.23: ಕ್ರೈಸ್ ಅಡಿಯಲ್ಲಿನ ವಸತಿ ಶಾಲೆಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಸತಿ ಶಾಲೆಗಳ ನೌಕರರು ಇಂದು ಅನೇಕ ಸೇವಾ ಸೌಲಭ್ಯಗಳಿಂದ ವಂಚಿತರಾಗುರುತ್ತಿದ್ದು ಇತರೆ ಇಲಾಖೆಯ ಶಿಕ್ಷಕರಿಗೆ ದೊರಕುವ ಸೇವಾ ಸೌಲಭ್ಯಗಳನ್ನು ತಮಗೂ ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ಕೃಷಿ ಶಿಕ್ಷಣ ಹಾಗೂ ಸಾಂಸ್ಕøತಿಕ ಸಂಘದ ಸಭಾಂಗಣದಲ್ಲಿ ವಸತಿ ಶಾಲೆ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜ್ಯೋತಿ ಸಂಜೀವಿನಿ,ಕೆಜಿಐಡಿ,ಡಿಸಿಇಆರ್ ಜಿ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಅನೇಕ ಬಾರಿ ಸಂಬಂಧಿಸಿದ ಇಲಾಖೆಗೆ ಒತ್ತಾಯಿಸಲಾಗಿದೆ ಮುಂದಿನ ದಿನಗಳಲ್ಲಿ ಸರಕಾರದ ಮೇಲೆ ಒತ್ತಡ ಹೇರಿ ವೃತ್ತಿ ಸಮಸ್ಯೆಗಳನ್ನು ಬಹೆಗರಿಸಲಾಗುವುದು ಎಂದು ತಿಳಿಸಿದರು.
ನಿಕಟಪೂರ್ವ ಜಿಲ್ಲಾ ಸಮನ್ವಯಾಧಿಕಾರಿ ಶಿವರಾಮ ಚವ್ಹಾಣ ಮಾತನಾಡಿ, ಎಲ್ಲಾ ಸಿಬ್ಬಂದಿಗಳು ಸೌಹಾರ್ದಯುತವಾಗಿ ಕೆಲಸಮಾಡಿದ್ದರಿಂದ ಪ್ರತಿ ವರ್ಷ ವಸತಿ ಶಾಲೆಗಳ ಫಲಿತಾಂಶ ಉತ್ತಮವಾಗಿ ಬರುತ್ತಿದೆ ಎಂದು ಹೇಳಿದ ಅವರು ತಮ್ಮ ಅವಧಿಯಲ್ಲಿ ನಡೆದ ಜಿಲ್ಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಬಿಚ್ಚಿಟ್ಟರು.
ನೂತನ ಜಿಲ್ಲಾ ಸಮನ್ವಯಾಧಿಕಾರಿ ಶಿವಪುತ್ರ ಕಕ್ಕಳಮೇಲಿ, ವಸತಿ ಶಾಲೆಗಳ ಪ್ರಾಂಶುಪಾಲರ ಸಂಘದ ರಾಜ್ಯ ಉಪಾಧ್ಯಕ್ಷ ಶರಣಬಸಪ್ಪ ಮಾಗಶೆಟ್ಟಿ, ನವೀದ್ ಅಂಜುಂ ಸಲ್ಮಾ, ಜಿಲ್ಲಾ ಅಧ್ಯಕ್ಷ ಡಾ.ಬಿ.ಆರ್.ತಳವಾರ,ಅಣವೀರ ಹರಸೂರ ಮಾತನಾಡಿದರು.
ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಕೊಡೆಕಲ್ ಅಧ್ಯಕ್ಷತೆ ವಹಿಸಿದ್ದರು.ಗೌರವಾಧ್ಯಕ್ಷ ಡಾ.ರಾಜಶೇಖರ ಮಾಂಗ್ ಸ್ವಾಗತಿಸಿದರು. ಅಶೋಕ ಕೋಟೆ ನಿರೂಪಿಸಿದರು.ಪ್ರದೀಪ್ ಪವಾಡಿ ವಂದಿಸಿದರು.ಉಪಾಧ್ಯಕ್ಷ ಶಿವಾನಂದ ನಿರೋಣಿ,ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಬೆಳಗುಂಪಿ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೊ.ದೇ.ವ.ಶಾಲೆ ಕೋಗನೂರು ಪ್ರಾಂಶುಪಾಲ ನವೀದ ಅಂಜುಮ್ ಸಲ್ಮಾ, ಕಿ.ರಾ.ಚ.ವ. ಶಾಲೆ, ಚೌಡಾಪುರ ಕನ್ನಡ ಭಾಷಾ ಶಿಕ್ಷಕಿ ಫರ್ಜಾನಾ ಪಟೇಲ, ಡಿ.ಬಿ.ಆರ್.ಎಸ್ ಫರತಾಬಾದ ಇಂಗ್ಲೀಷ ಭಾಷಾ ಶಿಕ್ಷಕಿ ಕವಿತಾ ಕುಮಾರಿ, ಮೊ.ದೇ.ವ.ಶಾಲೆ ಕಾಳಗನೂರು ಹಿಂದಿ ಭಾಷಾ ಶಿಕ್ಷಕ ಕಪೀಲ ಚವ್ಹಾಣ, ಐ.ಜಿ.ಆರ್.ಎಸ್ ಕೋಳ್ಕೂರು ಗಣಿತ ಶಿಕ್ಷಕ ಸುರೇಶ ಹುಗ್ಗಿ, ಮೊ.ದೇ.ವ.ಶಾಲೆ ಹೆಬ್ಬಾಳ ವಿಜ್ಞಾನ ಶಿಕ್ಷಕಿ ಜ್ಯೋತಿ ಹೆಚ್, ಎಸ್.ಸಿ/ಎಸ್.ಟಿ ಜಗತ್ ಕಲಬುರಗಿ ಸಮಾಜ ವಿಜ್ಞಾನ ಶಿಕ್ಷಕಿ ವಿಜಯಲಕ್ಷ್ಮಿ ದಾಸರೆ, ಮೊ.ದೇ.ವ.ಶಾಲೆ ಜೇವರ್ಗಿ ದೈಹಿಕ ಶಿಕ್ಷಣ ಶಿಕ್ಷಕ ಪ್ರಭುಗೌಡ ಮಾಡಗಿ, ಕಿ.ರಾ.ಚ.ವ. ಶಾಲೆ, ಗುಂಡಗುರ್ತಿ ಕಂಪ್ಯೂಟರ್ ಶಿಕ್ಷಕ ಪವಿತ್ರಾ ಎಸ್. ವಾಲಿಕಾರ, ಕಿ.ರಾ.ಚ.ವ. ಶಾಲೆ, ಎನ್.ಎನ್.ತಾಂಡಾ ಸಂಗೀತ ಶಿಕ್ಷಕ ಬದರಿನಾಥ ಮುಡಬಿ, ಮೊ.ದೇ.ವ.ಶಾಲೆ ಗುಂಡಗುರ್ತಿ ಚಿತ್ರಕಲಾ ಶಿಕ್ಷಕ ಯಲ್ಲಪ್ಪಾ, ಮೊ.ದೇ.ವ.ಶಾಲೆ ಹೆಬ್ಬಾಳ ಪ್ರಥಮ ದರ್ಜೆ ಸಹಾಯಕರ ಕುಮಾರಸ್ವಾಮಿ ನಿಂ. ಹಿರೇಮಠ, ಎಸ್.ಸಿ/ಎಸ್.ಟಿ ಜಗತ್ ಕಲಬುರಗಿ ನಿಲಯಪಾಲಕರಾದ ಪಾರ್ವತಿ ಘಂಟಿ, ಭಾಗ್ಯಲಕ್ಷ್ಮಿ, ಇವರನ್ನು ಪ್ರಶಸ್ತಿ ಪ್ರಧಾನ ಮಾಡಲಾಯಿತು.