ವಸತಿ ಶಾಲೆಯ ಸ್ವಚ್ಚತೆ ಕಾಪಾಡಲು ಶಾಸಕರ ಸಲಹೆ

(ಸಂಜೆವಾಣಿ ವಾರ್ತೆ)
ಹುಮನಾಬಾದ : ಜು.16:ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಸಿದ್ದಲಿಂಗಪ್ಪಾ (ಸಿದ್ದು) ಪಾಟೀಲ ರವರು ಕ್ಷೇತ್ರದ ಹಳ್ಳಿಖೇಡ (ಕೆ) ಗ್ರಾಮದ ಹೊರವಲಯದಲ್ಲಿ ಬರುವ ಮುರಾರ್ಜಿ ದೇಸಾಯಿ ಬಾಲಕ ಮತ್ತು ಬಾಲಕಿ ವಸತಿ ಶಾಲೆಗೆ ಅನೀರಿಕ್ಷೀತ ಭೇಟಿ ನೀಡಿ, ವಸತಿ ನಿಲಯದ ಸ್ವಚ್ಛತಾ ಮತ್ತು ಆಹಾರ ಪದಾರ್ಥಗಳನ್ನು ಪರೀಶಿಲಿಸಿ ಮತ್ತು ವಿದ್ಯಾರ್ಥಿಗಳು ತಂಗುವ ಕೋಣೆಗಳನ್ನು ವೀಕ್ಷಣೆ ಮಾಡಿ, ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟವನ್ನು ಸ್ವಂತ ವಿದ್ಯಾರ್ಥಿಗಳೊಂದಿಗೆ ಆಹಾರ ಸೇವಿಸಿ ಗುಣಮಟ್ಟದ ಆಹಾರ ಪದಾರ್ಥವನ್ನು ಪರೀಶಿಲಿಸಿದ್ದರು.
ವಸತಿ ನಿಲಯದ ಪ್ರಾಶುಂಪಾಲರಿಗೂ ಮತ್ತು ವಸತಿ ಆಡಳಿತ ಸಿಬ್ಬಂಧಿ ವರ್ಗದವರಿಗೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸೂಚಿಸಿ, ಸ್ವಚ್ಛತೆ ಕಾಪಾಡುವಂತೆ ಮಾರ್ಗದಂಡನೆ ನೀಡಿ, ಮಕ್ಕಳ ಕುಂದು ಕೊರತೆಯನ್ನು ಆಲಿಸಿ, ವಸತಿ ನಿಲಯಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಮೋಹಳೆ, ಜ್ಞಾನದೇವ ಧೂಮಾಳೆ, ಗಿರೀಶ ತುಂಬಾ, ನಾಗಭೂಷಣ ಸಂಗಮ್, ಸಂಜು ವಾಡೇಕರ್, ಪ್ರಕಾಶ ಮಣಿಗೀರೆ, ರಾಹು ಪಾಟೀಲ, ಸಾಗರ ಭೂರಿ ಇನ್ನಿತರು ಉಪಸ್ಥೀತರಿದ್ದರು.