ವಸತಿ ಶಾಲೆಯ ಕಟ್ಟಡ ಕಾಮಗಾರಿ ಗುಣಮಟ್ಟವಾಗಿ ಶೀಘ್ರ ಪೂರ್ಣಗೊಳಿಸಲು ಸೂಚನೆ

ಸಂಜೆವಾಣಿ ವಾರ್ತೆ

ಜಗಳೂರು.ಜೂ.೩೦:-ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುವ ಹೊಸಟ್ಟಿ ಗ್ರಾಮದ ಹತ್ತಿರ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯನ್ನು  ವಿಳಂಬ ಮಾಡದೆ ಉತ್ತಮ ಗುಣಮಟ್ಟದ ರೀತಿಯಲ್ಲಿ ಕಟ್ಟಡ ಕಾಮಗಾರಿ ಯನ್ನು ಶೀಘ್ರ ಪೂರ್ಣ ಗೊಳಿಸಿ‌ ಶಾಸಕ ಬಿ. ದೇವೇಂದ್ರಪ್ಪ ಸೂಚಿಸಿದರು.ತಾಲೂಕಿನ ಹೊಸಹಟ್ಟಿ ಗ್ರಾಮದ ಹೊರಹೊಲಯದಲ್ಲಿನ 22.50 ಕೋಟಿ ವೆಚ್ಚದ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ಕಾಮಗಾರಿ ಯನ್ನು ದಿಡೀರನೆ ಭೇಟಿ ಮಾಡಿ ವೀಕ್ಷಿಸಿ ನಂತರ ಮಾತನಾಡಿ ದರು.ತಾಲೂಕಿನಲ್ಲಿ ಸ್ವಂತ ಕಟ್ಟಡವಿಲ್ಲದೆ ವಸತಿ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡಚಣೆಯಾಗಿವೆ.ಸುಗಮವಾಗಿ ಗುಣಮಟ್ಟದ ಆಹಾರ ಶಿಕ್ಷಣ,ವಸತಿ ಸೌಲಭ್ಯಗಳಿಗಾಗಿ ಸುಸಜ್ಜಿತ ಕಟ್ಟಡಗಳ ಅವಶ್ಯಕತೆಯಿದ್ದು.ಅನುದಾನ‌ ಬಿಡುಗಡೆಯಂತಹ ನೆಪಯೊಡ್ಡುವ ಅಧಿಕಾರಿಗಳು ಗುತ್ತಿಗೆದಾರರು ನಿರ್ಲಕ್ಷ್ಯ ಸಲ್ಲದು ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳಬೇಕು ಎಂದು ತಾಕೀತು ಮಾಡಿದರು.ಸರಕಾರ ವಸತಿ ಶಾಲೆಗಳಿಗೆ ಸಾವಿರಾರು ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ.ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷದ ಮುಂದಿನ 5 ವರ್ಷಗಳ ಆಡಳಿತಾವಧಿಯಲ್ಲಿ ಹೆಚ್ಚು ಅನುದಾನ ತಂದು ವಸತಿ ಶಾಲೆಗಳನ್ನು ಉನ್ನತೀಕರಿಸ ಲಾಗು ವುದು ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಶೈಕ್ಷಣಿಕ ಅಭಿವೃದ್ದಿ ಯೇ ನನ್ನ ಗುರಿ ಎಂದು ಹೇಳಿದರು.”ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶ ಕ ಬಿ.ಮಹೇಶ್ವರಪ್ಪ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ದೊಣ್ಣೆ ಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಿದ್ಲಿಂಗಪ್ಪ ಮುಖಂಡರಾದ ಸಿ.ತಿಪ್ಪೆ ಸ್ವಾಮಿ,ಹಟ್ಟಿ ತಿಪ್ಪೇಸ್ವಾಮಿ, ಮಾಳಮ್ಮನ ಹಳ್ಳಿ ವೆಂಕಟೇಶ್,ತಮಲೇಹಳ್ಳಿ ತಿಮ್ಮಣ್ಣ.ಶೇಖರಪ್ಪ.ಬಸವರಾಜ್. ವಸತಿ ಕಟ್ಟಡದ ನಿರ್ಮಾಣದ ಇಂಜಿನಿಯರ್ ಮತ್ತು ಮುಖಂಡರು ಇದ್ದರು.