ವಸತಿ ಶಾಲೆಗೆ ಶಿಕ್ಷಕರ ನೇಮಕಾತಿಗೆ ಆಗ್ರಹ

ರಾಯಚೂರು,ಮೇ.೩೦-
ವಸತಿ ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಿರುವ ವಸತಿ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದರ ಜೊತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಸರ್ಕಾರಿ ಪ್ರೌಢ ಶಾಲೆಗಳಿಗೆ ಶಿಕ್ಷಕರ ಕೊರತೆ ಇದ್ದು, ತಕ್ಷಣವೇ ನೇಮಕಾತಿ ಮಾಡುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ ವಸತಿ, ಶಿಕ್ಷಣ ಸಂಸ್ಥೆಯಿಂದ ನಡೆಯುತ್ತಿರುವ ನವೋದಯ, ಮುರಾರ್ಜಿ, ಏಕಲವ್ಯ, ಕಿತ್ತೂರುರಾಣಿ ಚನ್ನಮ್ಮ, ಈ ಶಾಲೆಗಳು, ಬಡ ಜನಾಂಗದ ಹಾಗೂ ಎ.ಎಸ್ಟಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಸೌವಲತ್ತುಗಳನ್ನು ನೀಡಿ, ಉನ್ನತ ಮಟ್ಟದ ಪ್ರತಿಭಾವಂತೆ ವಿದ್ಯಾರ್ಥಿಗಳ ಜೊತೆಗೆ ಸಮಾನವಾಗಿ ಶಿಕ್ಷಣ ನೀಡಿ, ಸ್ಪರ್ಧಾತ್ಮಕ ಕೋರ್ಸಗಳಿಗೆ ತರಬೇತಿ ನೀಡಿ ಉನ್ನತ ಸ್ಥಾನದಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಲು ಈ ಶಾಲೆಗಳ ಉದ್ದೇಶವಾಗಿರುತ್ತದೆ.
ಆದರೆ, ಕರ್ನಾಟದಲ್ಲಿ ಈ ಶಾಲೆಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಮತ್ತು ವಿದ್ಯಾರ್ಥಿಗಳು ಶೌಚಾಲಯಗಳು ಇಲ್ಲದೆ, ಬೈಯಲಿನಲ್ಲಿಯೇ ಶೌಚಾಲಯ ಮಾಡುವ ವ್ಯವಸ್ಥೆ ಇದೆ ಕೂಡಲೇ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.
ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಾಲಕಳೆಯುತ್ತಿದ್ದಾರೆ, ಕೆಲವು ಶಾಲೆಗಳ ಕಟ್ಟಡಗಳು ಬೃಹದಾಕಾರವಾಗಿ ಕಟ್ಟಡ ಲಾಗಿದೆ. ಆದರೆ ಶಿಕ್ಷಕರ ಕೊರತೆ ಇದ್ದು, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿಸಲಾಗುತ್ತಿದ್ದಾರೆ. ಈ ವಸತಿ ಶಾಲೆಗಳಿಗೆ ಉಟೋಪಚಾರಕ್ಕೆ ಹೆಚ್ಚಿನ ಅನುದಾನ ಇದ್ದು ಆದರೆ ಕಳದ ಆಧಾರದಿಂದ ಕೂಡಿದ ಊಟವನ್ನು ವಿದ್ಯಾರ್ಥಿಗಳಿಗೆ ಬಳಸುತ್ತಿದ್ದಾರೆ, ದಲಿತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೋಗುವುದು ಬಿಟ್ಟು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಹಾಗೂ ಸರಕಾರಿ ನಿಢ ಶಾಲೆಗಳು ಪಾರಂಭಗೊಂಡಿದ್ದು, ಈ ಶಾಲೆಗಳಿಗೆ ಶಿಕ್ಷಕರ ಇರುವುದಿಲ್ಲ. ಪ್ರೌಢ ಶಾಲಾ ಶಿಕ್ಷಕರ ಹುದ್ದೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೋಧನೆ ಮಾಡಿಸುತ್ತಿದ್ದಾರೆ. ಇದರಿಂದ ಸುಮಾರು, ಹಳ್ಳಿಗಳ ವಿದ್ಯಾರ್ಥಿಗಳು ಅನುತ್ತೀರ್ಣರಾದ ಉದಾಹರಣೆಗಳು, ಸಾಕಷ್ಟು ಇರುತ್ತವೆ.
ಆದ್ದರಿಂದ ಕರ್ನಾಟಕ ವಸತಿ ಶಿಕ್ಷ ಸಂಸ್ಥೆವತಿಯಿಂದ ನಡೆಯುತ್ತಿರುವ ಮಾಹಿತಿ, ಶಾಲೆಗಳಿಗೆ ಶಿಕ್ಷಕರನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಹಾಗೂ ಸರಕಾರಿ ಪ್ರೌಢ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚನ್ನಬಸವ ಯಾಕ್ಲಸಪೂರು, ಜಿ. ಪ್ರಕಾಶ ಸಿರವಾರ, ಶರಣಪ್ಪ ದಿನ್ನಿ ಸೇರಿದಂತೆ ಉಪಸ್ಥಿತರಿದ್ದರು.