ವಸತಿ ಶಾಲೆಗೆ ಶಾಸಕರ ಭೇಟಿ


ನವಲಗುಂದ,ಸೆ.14: ನಗರದ ಹೊರವಲಯದಲ್ಲಿರುವ ಮುರಾರ್ಜಿ ವಸತಿ ಶಾಲೆಗೆ ಶಾಸಕ ಎನ್.ಎಚ್ ಕೋನರಡ್ಡಿ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕೊಡುವ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದರು.
ಅಡುಗೆ ಸಾಮಾಗ್ರಿಗಳನ್ನು, ಹಾಗೂ ಕಟ್ಟಡವನ್ನು,ಪರಿಶೀಲನೆ ಮಾಡಿದರು.
ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ತಪ್ಪದೆ ಒದಗಿಸಬೇಕೆಂದು ಸೂಚನೆ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಅವರು ವಿದ್ಯಾರ್ಥಿಗಳೊಂದಿಗೆ ಕುಳಿತು ಉಪಹಾರ ಸೇವಿಸಿದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಪ್ರಕಾಶ ಶಿಗ್ಲಿ, ಮೋದೀನಸಾಬ ಶಿರೂರ, ಮುಖಂಡರುಗಳಾದ ನವೀನ ಹೊಸಗೌಡರ, ಮದರಸಾಬ ಉಗರಗೋಳ, ಸುದಿರ ಅಬ್ಬು, ಪ್ರಕಾಶ ಭಜಂತ್ರಿ, ಲಕ್ಷ್ಮಣ ಹಳ್ಳದ, ದೇವೇಂದ್ರ ಶಾನವಾಡ ಉಪಸ್ಥಿತರಿದ್ದರು.