ವಸತಿ ಶಾಲೆಗೆ ಭೇಟಿ: ಪರಿಶೀಲನೆ

ಧಾರವಾಡ, ಜು18: ಹೆಬ್ಬಳ್ಳಿಯ ಮುರಾರ್ಜಿದೇಸಾಯಿ ವಸತಿ ಶಾಲೆ,ಹಾಗೂ ತಿಮ್ಮಾಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿಯವರು,ಕ್ಷೇತ್ರ ಶಿಕ್ಷಣಾಧಿಕಾರಿಗಳು ರಾಮಕೃಷ್ಣ ಸದಲಗಿಯವರೊಂದಿಗೆ ದಿಢೀರ ಭೇಟಿ ನೀಡಿ ಶಾಲಾ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಪರಿಶೀಲಿಸಿದರು.
ಈ ಸಂಧರ್ಭದಲ್ಕಿ ಶಿವಲೀಲಾ ವಿನಯ ಕುಲಕರ್ಣಿಯವರು ಅಡುಗೆ ಸಿಬ್ಬಂದಿ ಹಾಗೂ ವಾರ್ಡನ ಅವರಿಗೆ ಯಾವುದೇ ಕಾರಣಕ್ಕೂ ಕಳಪೆ ಮಟ್ಟದ ಆಹಾರ ಪೂರೈಸಕೂಡದು,ದಿನಂಪ್ರತಿ ತಾಜಾ ತರಕಾರಿಯನ್ನೇ ಉಪಯೋಗಿಸಬೇಕು,ಹಾಗೂ ಮಕ್ಕಳಿಗಾಗಿ ಬರುವ ಯಾವುದೇ ಪದಾರ್ಥಗಳ ದಿನಾಂಕಗಳನ್ನು ಪರಿಶೀಲಿಸಿ ನಂತರ ಅಡುಗೆ ಮಾಡಬೇಕು,ಎಲ್ಲ ಮಕ್ಕಳ ಆರೋಗ್ಯದ ಬಗ್ಗೆ ನಮ್ಮ ಮನೆಯ ಮಕ್ಕಳಂತೆ ನೋಡಬೇಕು ಎಂದರು.
ಶಾಲೆಯ ಅಭಿವೃದ್ದಿಗೆ ಪೂರಕವಾಗುವಂತ ಮತ್ತು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವಂತ ಪರಿಕರಗಳ ಪಟ್ಟಿ ಮಾಡಿ ನೀಡಿ ನಾನು ಶಾಸಕರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನಿಸುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಜರಾತಿ ಪರಿಶೀಲಿಸಿ ಮಕ್ಕಳೊಂದಿಗೆ ತೊಂದರೆಗಳ ಬಗ್ಗೆ ಚರ್ಚಿಸಿದರು.
ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಚನಬಸಪ್ಪ ಮಟ್ಟಿ, ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ, ಗ್ರಾಮಪಂಚಾಯತಿ ಸದಸ್ಯ ಮಂಜುನಾಥ ಭೀಮಕ್ಕನವರ, ಆತ್ಮಾನಂದ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.