ವಸತಿ ಶಾಲೆಗೆ ಭೂಮಿಪೂಜೆ₹ 7.5 ಕೋಟಿ ವೆಚ್ಚದಲ್ಲಿ ನಿರ್ಮಾಣ

ಹರಪನಹಳ್ಳಿ.ಸೆ.೨೬; ತಾಲ್ಲೂಕಿನ ಶೃಂಗಾರತೋಟ ಸಮೀಪ ₹7.5 ಕೋಟಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ  ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ತಿಳಿಸಿದರು.ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಗೃಹ ನಿರ್ಮಾಣ ಮಂಡಳಿಯಿಂದ ಅನುದಾನ ಮುಂಜೂರಾಗಿದ್ದು, ಶ್ರೀ ಬಿಲ್ಡರ್ಸ್ ಗುತ್ತಿಗೆ ಪಡೆದಿದೆ ಎಂದರು.
ಮಳೆಗಾಲ ಹೊರತುಪಡಿಸಿ 11 ತಿಂಗಳ ಅವಧಿಯಲ್ಲಿ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಿ ಹಸ್ತಾಂತರ ಮಾಡಬೇಕು. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಬೇಕು ಎಂದು ತಿಳಿಸಿದರು. ಶಾಲೆಯಲ್ಲಿ ಶಿಕ್ಷಕರ ವಸತಿ ಗೃಹಗಳು, ಅಡುಗೆ ಮನೆ, ಬಾಲಕ, ಬಾಲಕೀಯರ ಪ್ರತ್ಯೇಕ ಹಾಸ್ಟೆಲ್. ಅಕಾಡೆಮಿಕ್ ಬ್ಲಾಕ್ ನಿರ್ಮಿಸಲಾಗುವುದು ಎಂದು ಎಇಇ ಶರಣಪ್ಪ ತಿಳಿಸಿದರು.
ಯು.ಪಿ. ನಾಗರಾಜ್, ಸಂತೋಷ್, ಎಂ. ಮಲ್ಲೇಶ್, ರಾಘವೇಂದ್ರ ಶೆಟ್ಟಿ, ಗುತ್ತಿಗೆದಾರ ದಾದಾಪೀರ್, ಗಿರೀಶ್, ರಾಜಪ್ಪ, ನಿಂಗರಾಜ್, ಬಸವರಾಜ್, ವೀರೇಶ್, ಜಾವಿದ್, ಪ್ರಾಚಾರ್ಯ ಚಂದ್ರಶೇಖರಯ್ಯ ಇದ್ದರು.