ವಸತಿ ಶಾಲೆಗಳಲ್ಲಿ ಕೋವಿಡ್ ಟೆಸ್ಟ್

ನಂಜನಗೂಡು:ಮಾ:27: ಮೈಸೂರು ಜಿಲ್ಲೆಯಲ್ಲಿ ಕರೋನಾ ಮಹಾಮಾರಿಯು ಉಲ್ಬಣ ಗೊಳ್ಳುತ್ತಿರುವ ಮತ್ತು ನಂಜನಗೂಡಿನಲ್ಲಿ ಐದು ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಂಜನಗೂಡಿನ ಆರೋಗ್ಯ ಇಲಾಖೆ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯರ ವಸತಿ ಶಾಲೆಯಲ್ಲಿ ಸುಮಾರು 176 ವಿದ್ಯಾರ್ಥಿನಿಯರಿಗೆ ಮತ್ತು ಐದು ಜನ ಸಿಬ್ಬಂದಿಗಳಿಗೆ ಇಂದು ಕರಣ ಪರೀಕ್ಷೆ ನಡೆಸಲಾಯಿತು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಶಿವು ಅಭಿಷೇಕ್, ಶಿವು, ಪುಟ್ಟಿ ಹಾಗೂ ಕಿರಿಯ ಸಹಾಯಕ ವಿದ್ಯಾರ್ಥಿಗಳಾದ ಕುಸುಮ, ದಿವಾಕರ್ ಅಭಿಷೇಕ್, ವರುಣ್, ಹರ್ಷ, ವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶಿಲ್ಪ, ಶಿಕ್ಷಕರಾದ ಮಂಜುನಾಥ್ ಮತ್ತು ಶಾಂತಿ ಹಾಜರಿದ್ದರು.