ವಸತಿ ರಹಿತ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಶಾಸಕ  ಸೂಚನೆ 


ಯಲಬುರ್ಗಾ: ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ ಕುಕನೂರು ತಾಲೂಕಿನ ಗುದ್ನೆಪ್ಪನಮಠ, ಯಡಿಯಾಪೂರ, ವಿಜಯನಗರ, ಬೆದವಟ್ಟಿ, ಶಿರೂರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಗೊಂಡು ಕೇವಲ ಎರಡು ವರೆ ತಿಂಗಳಲ್ಲಿಯೇ  5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರದ 2023-24 ನೇ ಸಾಲಿನ ಆಯವ್ಯಯದಲ್ಲಿ ಮಂಡನೆ ಮಾಡಿ ಬಜೆಟ್ ಅನ್ನು ಸಹ ಹಂಚಿಕೆ ಮಾಡಿ ಇಡೀ ದೇಶದಲ್ಲಿ ಪ್ರತಿಯೋಂದು ಮನೆ ಮನೆಗೆ ಸರ್ಕಾರದ ಯೋಜನೆಗಳು ತಲುಪುವಂತಾಗಿದೆ. ಗುದ್ನೆಪ್ಪನ ಮಠ ಗ್ರಾಮದಲ್ಲಿ  ಹಲವಾರು ಕುಟುಂಬಗಳು ಹತ್ತಾರು ವರ್ಷಗಳಿಂದ ಗ್ರಾಮದಲ್ಲಿ ವಾಸಿಸುತ್ತಾ ಬಂದಿದ್ದು, ಅಂತ ಕುಟುಂಬಸ್ಥರಿಗೆ ಹಕ್ಕು ಪತ್ರಗಳನ್ನು ನಿಯಮಾನುಸಾರ ಹಂಚಿಕೆ ಮಾಡಲು ತಹಶೀಲ್ದಾರರಿಗೆ ತಿಳಿಸಿದರು.
ಅದೇ ರೀತಿ ಮಠದ ಅರ್ಚಕರು ಸೇವಾದಾರರು, ಭೂ ಹಿಡುವಳಿಯ ಪಹಣಿಗಳನ್ನು ನೀಡಲು ಭಕ್ತರು ಶಾಸಕರಿಗೆ ಒತ್ತಾಯ ಮಾಡಿದರು. ಕುಡಿಯೋ ನೀರು.
ಬಸ್ ಸ್ಟಾಂಡ್, ವಿದ್ಯುತ್ ನಿರಂತರ ಪೂರೈಕೆ, ಕೆರೆ ತುಂಬಿಸುವ ಯೋಜನೆ ಸೆರಿದಂತೆ ಹಲವಾರು ವಿಷಯಗಳ ಕುರಿತು ಗ್ರಾಮಸ್ಥರು ಶಾಸಕರೊಂದಿಗೆ ಚರ್ಚಿಸಿದರು. ಯಡಿಯಾಪೂರದಲ್ಲಿ ಹೊಸ ಹೈಸ್ಕೂಲ್ .ಶಿರೂರ ಗ್ರಾಮದಲ್ಲಿ ಹಕ್ಕು ಪತ್ರ ವಿತರಣೆ ಕುರಿತು ಚರ್ಚಿಸಿದರು.
ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ, ಉಪತಹಶೀಲ್ದಾರರು ಮತ್ತು ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು, ಕಾಂಗ್ರೆಸ್ ಪಕ್ಷದ ಮುಖಂಡರು ಭಾಗವಹಿಸಿದ್ದರು