ವಸತಿ ಯೋಜನೆಯಲ್ಲಿ ಅವ್ಯವಹಾರ ಕರವೇ ಆರೋಪ

ಬಸವನಬಾಗೇವಾಡಿ:ಆ.5: ಪುರಸಭೆಯ ವಸತಿ ಯೋಜನೆ ಅಡಿಯಲ್ಲಿ ಅವ್ಯವಹಾರ ಎಸಗಿರುವ ಕರ ವಸೂಲಿಗಾರ ಭೀರಪ್ಪ ಶೆಟ್ಟೆಪ್ಪಗೋಳ ಅವರನ್ನು ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಅಗಸ್ಟ 7 ರಂದು ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದು ಕರವೇ ಜಿಲ್ಲಾ ಯುವ ಘಟಕ ಅಧ್ಯಕ್ಷ ಅಶೋಕ ಹಾರಿವಾಳ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಟ್ಟಣದ ಪುರಸಭೆಯಲ್ಲಿ ಕರ ವಸೂಲಿಗಾರ ಆಗಿ ನಿಯೋಜನೆಗೊಂಡಿರುವ ಭೀರಪ್ಪ ಶೆಟ್ಟೆಪ್ಪಗೋಳ ಎಂಭ ಸರ್ಕಾರಿ ನೌಕರ ಕರ ವಸೂಲಿ ಕೆಲಸವನ್ನು ಬಿಟ್ಟು ಆಶ್ರಯ ವಿಭಾಗದಡಿಯಲ್ಲಿ ಕಾರ್ಯ ನಿರ್ವಹಿಸುವುದಲ್ಲದೆ ಸರ್ಕಾರದ ಯೋಜನೆ ಪಡೆಯಬೇಕಾದರೆ ಹಣ ನೀಡುವಂತೆ ಸಾರ್ವಜನಿಕರಿಂದ ಲಂಚ ಪಡೆದು ಆಶ್ರಯ ಯೋಜನೆಯಲ್ಲಿ ಸಾಕಷ್ಟು ಅವ್ಯವಹಾರ ಮಾಡಿದ್ದಾನೆ, ಇದರಿಂದ ಸಾಕಷ್ಟು ನಿರ್ಗತಿಕ ಬಡ ಜನರು ಸರ್ಕಾರಿ ಸೌಲಭ್ಯದಿಂದ ವಂಚಿತಗೊಂಡು ಪರದಾಡುವಂತಾಗಿದೆ,

ಅಲ್ಲದೇ ಈ ವಿಷಯ ಕುರಿತು ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಮಾಡಿದಾಗ ಭೀರಪ್ಪ ಶೆಟ್ಟೆಪ್ಪಗೋಳ ದಾಖಲೆಗಳನ್ನು ನಾಶ ಮಾಡುವ ಸಲುವಾಗಿ ಪುರಸಭೆಯಿಂದ ದಾಖಲೆಗಳನ್ನು ಕದಿಯಲು ಯತ್ನಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಾಕಿಕೊಂಡಿರುತ್ತಾನೆ, ಈ ವಿಷಯ ಕುರಿತು ಸಾಕಷ್ಟು ಬಾರಿ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಜಿಲ್ಲಾಧಿಕಾರಿಗಳು ಭೀರಪ್ಪ ಶೆಟ್ಟೆಪ್ಪಗೋಳನನ್ನು ಅಮಾನತ್ತು ಗೊಳಿಸಿ ತನಿಖಾ ತಂಡ ರಚಿಸಿ ಸೂಕ್ತ ತನಿಖೆ ಮಾಡುವುದಾಗಿ ಭರವಸೆ ನೀಡಿತ್ತು ಆದರೆ ಸುಮಾರು 4-5 ತಿಂಗಳು ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.

ಈ ವಿಷಯ ಕುರಿತು ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯು ಮಂದಗತಿಯಲ್ಲಿ ಸಾಗುತ್ತಿದೆ ಕೂಡಲೇ ಜಿಲ್ಲಾಧಿಕಾರಿಗಳು ಭೀರಪ್ಪ ಶೆಟ್ಟೆಪ್ಪಗೋಳನ್ನು ಅಮಾನತ್ತುಗೊಳಿಸಿ ಈ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಎಷ್ಟೇ ಪ್ರಭಾವಿ ಆಗಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೇ ಆಗ್ರಹಿಸಿ ಧರಣಿ ಸತ್ಯಾಗ್ರಹದೊಂದಿಗೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವದು

ಈ ಸಂಧರ್ಭದಲ್ಲಿ ಮುಂಖಡರಾದ ಮಂಜುನಾಥ ಹಾರಿವಾಳ, ಸಿದ್ದು ಮೇಟಿ, ನಬೀ ರಸೂಲ ಬಾನಕಾರ, ಮಡುಗೌಡ ಬಾವಿಕಟ್ಟಿ, ಉಮೇಶ ವಾಲಿಕಾರ, ರವಿ ವಡ್ಡರ, ಹಣಮಂತ ಹೊಸಮನಿ, ಬಾಲಚಂದ್ರ ಮಾಕೊಂಡ, ಭೀಮು ಹುಲ್ಲೂರ ಸೇರಿದಂತೆ ಮುಂತಾದವರು ಇದ್ದರು.