ವಸತಿ ಬಡಾವಣೆ ಯೋಜನೆ ಸಂಪೂರ್ಣ ವಿಫಲ

ರಾಯಚೂರು,ಜೂ.೦೩-
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ೨೦೧೩ ಮತ್ತು ೧೪ ನೇ ಸಾಲಲ್ಲಿ ನಿರ್ಮಿಸಿದ ವಸತಿ ಬಡಾವಣೆ ಯೋಜನೆ ಸಂಪೂರ್ಣ ವಿಫಲವಾಗಿದೆ ಎಂದು ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಬಾಬುರಾವ್ ಆರೋಪಿಸಿದ್ದಾರೆ.
ಇದು ಒಟ್ಟು ೨೫೩ ಎಕರೆ ಬಡಾವಣೆ ನಿರ್ಮಾಣಕ್ಕೆ ತೆಗೆದುಕೊಂಡಿದ್ದು, ೨೫೫ ಮನೆಗಳು ಗುಣಮಟ್ಟದಲ್ಲಿ ಕಟ್ಟಲಾಗಿದೆ. ೩೦೮೭ ನಿವೇಶನಗಳು ( ಓಪನ್ ಪ್ಲಾಟಗಳು) ನಿರ್ಮಾಣವಾಗಿದ್ದು, ಇದರ ಯೋಜನಾ ಗಾತ್ರ ೧೫೦ ಕೋ.ರೂ. ಆದರೂ, ಪ್ರಯೋಜನಕ್ಕೆ ಬಂದಿಲ್ಲ. ಇದರಲ್ಲಿ ಬರೀ ೬೦ ಮನೆಗಳು ಹಂಚಿಕೆಯಾಗಿದ್ದು, ಉಳಿದವುಗಳು ಹಾಳು ಬಿದ್ದಿವೆ.ಜನವಸತಿ ಇರದ ಕಾರಣ ಮನೆಗಳ ಬಾಗಿಲುಗಳು ಕಿತ್ತು ಹೋಗಿವೆ.ಮನೆ ಹೊರಗೆ ಮತ್ತು ಒಳಗೆ ಕಸ ತುಂಬಿದ. ಜಂಗಲ್ ಬೆಳೆದು ಹೊಸ ಮನೆಗಳ ಹೊಳಪೆ ಕಳೆದು ಹೋಗಿದೆ.ಕೆಲವರು ಹಣ ಕಟ್ಟಿ, ಮನೆ ವಿನ್ಯಾಸ ತಮಗೆ ಬೇಕಾದಂತೆ ಮಾಡಿಕೊಂಡರೂ, ಮನೆಗಳ ಮಾರಾಟ ಸರಿಯಾಗಿ ಆಗದ ಕಾರಣ, ಬಿಟ್ಡು ಹೋಗಿದ್ದಾರೆ.ಹೊಸ ಮನೆಗಳು ಅನೈತಿಕ ತಾಣಗಳಾಗಿವೆ.ವಿಷ ಜಂತುಗಳ ಓಡಾಟ ನಿರಾತಂಕವಾಗಿದೆ.ತಕ್ಷಣ ಅವ್ಯವಸ್ಥೆ ಅವಲೋಕನ ಮತ್ತು ಅಭಿವೃದ್ದಿಪಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಬೋಸರಾಜ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಬೇಕು.ಬೃಹತ್ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲರು ಸಹ ಮನೆಗಳು ಹಾಳು ಬಿಳುವ ಮೊದಲೇ ನಿಯಮಗಳು ಸಡಿಲಿಸಿ, ೩೦ ರಿಂದ ೫೦ ರಷ್ಟು ರಿಯಾಯಿತಿಯಲ್ಲಿ ಸಾಮಾನ್ಯ ಜನರಿಗೂ ಮನೆಗಳ ಹಂಚಿಕೆಗೆ ಮುಂದಾಗಲು ಆಗ್ರಹಿಸಿದ್ದಾರೆ. ಬಿಪಿಎಲ್ ಕಾರ್ಡುದಾರರು, ಪರಿಶಿಷ್ಠ ಜಾತಿ, ಪರಿಶಿಷ್ಠ ಜನಾಂದವರಿಗೆ ಅತ್ಯಂತ ಕಡಮೆ ದರದಲ್ಲಿ ಹಂಚಿಕೆಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅಸ್ಕಿಹಾಳ ಬಸವರಾಜ ಬಿಜೆಪಿ ಎಸ್ಟಿ ವಿಭಾಗದ ಅಧ್ಯಕ್ಷರು, ನಾಗೇಶ್ವರರಾವಿ ಇದ್ದರು.

ಬಾಕ್ಸ್
ಓರಿಸ್ಸಾದಲ್ಲಿ ರೈಲು ಅಪಘಾತ ಸಂಭವಿಸಿ, ಜನರ ಸಾವು ನೋವಾಗಿದ್ದು, ನೋವು ತಂದಿದೆ ಎಂದು ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ.
ಗಾಯಾಳುಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಕೋರಿದರು.ಭೀಕರ ಅಪಘಾತದಲ್ಲಿ ಮೃತ ಹೊಂದಿದ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ವಿತರಿಸಬೇಕೆಂದು ರೈಲ್ವೆ ಮಂತ್ರಿಗಳಾದ ಅಶ್ವೀನ್ ವೈಷ್ಣವ್ ಗೆ ಮನವಿ ಮಾಡಿದ್ದಾರೆ.