ವಸತಿ , ನಿವೇಶನಕ್ಕೆ ಒತ್ತಾಯಿಸಿ ಕರವೇಯಿಂದ ಪ್ರತಿಭಟನೆ

.ಜಗಳೂರು.ಸೆ.೨೨: ಸರ್ಕಾರದ ವಿವಿಧ ವಸತಿ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನೆಡೆಸಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಲೋಕ್ಯನಾಯಕ್, ತಾಲೂಕು ಕಚೇರಿ ತೆರಳಿ ತಹಶೀಲ್ದಾರ್ ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.ಕರವೇ ಅಧ್ಯಕ್ಷ ತಾಲೂಕು ಅಧ್ಯಕ್ಷ ಎಂ ವೈ ಮಹಾಂತೇಶ್ ಮಾತನಾಡಿದ ಅವರು ಕರ್ನಾಟಕದಲ್ಲಿಯೇ ನಂಜುAಡಪ್ಪ ವರದಿ ಪ್ರಕಾರ ಅತ್ಯಂತ ಬರಪೀಡಿತ ತಾಲೂಕಿನಲ್ಲಿ ಜಗಳೂರು ಎರಡನೇ ಸ್ಥಾನದಲ್ಲಿದೆ. ಯಾವುದೇ ನದಿಮೂಲ ಜಲಮೂಲಗಳಿಲ್ಲದ ಯಾವುದೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಲ್ಲದ ಅತ್ಯಂತ ನತದೃಷ್ಟ ತಾಲೂಕು ಆಗಿದೆ. ಇಂತಹ ತಾಲೂಕಿನಲ್ಲಿ ಸರಾಸರಿ ಶೇಕಡ ಎಪ್ಪತ್ತಕ್ಕೂ ಹೆಚ್ಚು ಬಡ ಹಾಗೂ ಮಧ್ಯಮವರ್ಗದ ಜನಗಳೇ ವಾಸಿಸುತ್ತಿದ್ದಾರೆ. ಅರ್ಹ ಫಲಾನುಭವಿಗಳಿಗೆ ವಸತಿ ಹಾಗೂ ನಿವೇಶನ ದೊರೆಯದೆ ಬದುಕು ಅತಂತ್ರವಾಗಿದೆ. ಹೀಗಾಗಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಸರ್ಕಾರದ ವಸತಿ ಯೋಜನೆಯಡಿ ವಸತಿಯ ಮತ್ತು ನಿವೇಶನವನ್ನು ನೀಡಬೇಕೆಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಕ.ರ.ವೇ ಗೌರವ ಅಧ್ಯಕ್ಷ ಸುರೇಶ್ ಸಂಗೊಳ್ಳಿ, ಕಾರ್ಯದರ್ಶಿ ಹರ್ಷ , ಕರವೇ ಕಾನೂನು ಸಲಹೆಗಾರ ವಕೀಲ ಆರ್ ಓಬಳೇಶ್ , ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಡಿ. ಅಬ್ದುಲ್ ರಖೀಬ್ , ಜಗಳೂರು ಗೊಲ್ಲರಹಟ್ಟಿ ಗ್ರಾಮ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷ ರೇಖಾ ಶಂಭುಲಿAಗಪ್ಪ, ಗೌರವ ಅಧ್ಯಕ್ಷೆ ತಿಪಮ್ಮ , ಉಪಾಧ್ಯಕ್ಷ ಶಾಹೀನ ಬೇಗಂ , ಕಾರ್ಯದರ್ಶಿ ವಾಣಿ , ಸಂಘಟನಾ ಕಾರ್ಯದರ್ಶಿ ಚಂಪಾವತಿ, ಪದಾಧಿಕಾರಿಗಳಾದ ವೇದಾವತಿ , ಮಂಜುಳಮ್ಮ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.21 ಜೆಜಿ.ಎಲ್.1) ಸರ್ಕಾರದ ವಿವಿಧ ವಸತಿ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ಜಗಳೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನೆಡೆಸಿ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಲೋಕ್ಯನಾಯಕ್, ತಾಲೂಕು ಕಚೇರಿ ತೆರಳಿ ತಹಾಶಿಲ್ದಾರ್ ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.