ವಸತಿ ನಿಲಯ ಕಾರ್ಮಿಕರ ಪ್ರತಿಭಟನೆ

ಕಲಬುರಗಿ,ಅ.10:50 ಜನ ವಿದ್ಯಾರ್ಥಿಗಳಿಗೆ 2 ಕಾರ್ಮಿಕರು ಎಂಬ ಸಮಾಜ ಕಲ್ಯಾಣ ಇಲಾಖೆಯ ಆದೇಶವನ್ನು ಹಿಂಪಡಿಯಬೇಕು. ಪ್ರಸಕ್ತ ಕನಿಷ ನಿ ವೇತನ 35000 ರೂ ನಿಗದಿ ಮಾಡಬೇಕು. ಲೇಬರ್ ಲಾ ಕಡ್ಡಾಯವಾಗಿ ಪಾಲಿಸಬೇಕು. ವಸತಿ ನಿಲಯ ಕಾರ್ಮಿಕರನ್ನು ಖಾಯಂಗೋಳಿಸಬೇಕು. ಇತ್ಯಾದ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂಭಾಗದಲ್ಲಿ ವಸತಿ ನಿಲಯ ಕಾರ್ಮಿಕರಿಂದ ಬೃಹತ್ ಪ್ರತಿಭಟನೆಯ ಮೂಲಕ ಮನವಿಪತ್ರವನ್ನು ಜಿಲ್ಲಾಧಿಕಾರಿಗಳು ಕಲಬುರಗಿ ಅವರ ಮೂಲಕ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ ಹಾಗೂ ಹೆಚ್.ಸಿ.ಮಹಾದೇವಪ್ಪ ಸಚಿವರು ಸಮಾಜ ಕಲ್ಯಾಣ ಇಲಾಖೆ ಅವರಿಗೆ ಕಳುಹಿಸಲಾಯಿತು.
ಪ್ರತಿಭಟನೆಯಲ್ಲಿ ವಸತಿ ನಿಲಯ ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಶರಣು ಹೇರೂರ. ಜಿಲ್ಲಾಧ್ಯಕ್ಷರಾದ ಕಾಮ್ರೇಡ್ ರಾಘವೇಂದ್ರ ಎಮ್.ಜಿ ಹಾಗೂ ಮುಖಂಡರಾದ ಭಾಗಣ್ಣ ಬಿ ಬುಕ್ಕಾ. ಸಂತೋಷ ದೊಡ್ಡಮನಿ. ಬಸವರಾಜ ಹುಳಗೋಳ. ಶರಣಮ್ಮ ಕಟ್ಟಿಮನಿ. ರಮೆಶ ಮುಧೋಳ. ವಿಜಯಲಕ್ಷ್ಮಿ ಕಾಶಿ. ಕೀರಣ ಹೋಸೂರ. ಬಸವರಾಜ ನಾಟೇಕರ್. ಪೀರಪ್ಪ ಜೇವರ್ಗಿ. ಗುರುನಾಥ ದೊಡ್ಡಮನಿ. ತೋಫಿಕ್ ಕೋರವಾರ. ಸೋನಾಬಾಯಿ ಬಂಕೂರ. ಹಿರಗಪ್ಪ ಕರಣಿಕ. ಮಾರುತಿ ಬೇವನಕಟ್ಟಿ. ಮಲ್ಲಮ್ಮ ರಂಜೋಳ. ಮರೇಪ್ಪ ಅಲ್ಲಿಪೂರ. ಚಂದ್ರಶೇಕರ ಧನ್ನೆಕರ್. ಆಕಾಶ ಮೇಂಗನ್. ಹಾಜಮ್ಮ. ಕಾಶಿಬಾಯಿ.ಶಾಲಿನಿ.ಸುಮಂಗಲಾ. ಉಪಸ್ಥಿತರಿದ್ದರು.