ವಸತಿ ನಿಲಯ ಅಡುಗೆ ಸಿಬ್ಬಂದಿಗಳ ವೇತನ ಪಾವತಿಗೆ ಆಗ್ರಹ

ಲಿಂಗಸುಗೂರು.ಏ.೨೦-ತಾಲೂಕಿನ ವಿವಿಧ ಹಾಸ್ಟೇಲ್‌ಗಳಲ್ಲಿ ಅಡುಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಕೂಡಲೇ ವೇತನ ಪಾವತಿ ಮಾಡಬೇಕೆಂದು ಆಗ್ರಹಿಸಿ ಸಿಬ್ಬಂದಿಗಳು ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ನೇತೃತ್ವದಲ್ಲಿ ಲಿಂಗಸುಗೂರಿನಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಆದೀನದಲ್ಲಿ ಹಾಸ್ಟೇಲ್‌ಗಳಲ್ಲಿ ಕೆಲಸ ಅಡುಗೆ ಸೇರಿ ಇತರೆ ಕೆಲಸಗಳ ಮಾಡುತ್ತಿದ್ದಾರೆ ಆದರೆ ಕಳೆದ ೪-೫ ತಿಂಗಳಿಂದ ವೇತನವಿಲ್ಲದೇ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪರಿತಪಿಸುಂತಾಗಿದೆ. ಅಲ್ಲದೇ ಕಳೆದ ೪ ವರ್ಷಗಳಿಂದ ವೇತನ ಹೆಚ್ಚಳ ಮಾಡದೇ ಕಡಿಮೆ ಹಣದಲ್ಲಿ ದುಡಿಯುತ್ತಿದ್ದಾರೆ. ಕೂಡಲೇ ವಸತಿ ನಿಲಯಗಳ ಸಿಬ್ಬಂದಿಗೆ ಬಾಕಿ ವೇತನ ಪಾವತಿ ಜೊತೆಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಸಮಿತಿ ಅಧ್ಯಕ್ಷ ಅಮರೇಶ ಐದಬಾವಿ, ಅಮರೇಗೌಡ ಗುಂತಗೋಳ, ಶಿವಲಿಂಗ ಹಟ್ಟಿ, ವೆಂಕಟೇಶ ಬುಂಕಲದೊಡ್ಡಿ, ಮೌನೇಶ ಸೇರಿದಂತೆ ಅಡುಗೆ ಸಿಬ್ಬಂದಿಗಳು ಇದ್ದರು.