ವಸತಿ ನಿಲಯದ ಸಮಸ್ಯೆ ಬಗ್ಗೆಹರಿಸಲು ಅಗ್ರಹಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ

ಕಲಬುರಗಿ,ಜ.13: ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವಸತಿಯದಲ್ಲಿ ವಿದ್ಯಾರ್ಥಿನಿಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ರಿಸರ್ಚ್ ಸ್ಕಾಲರ್ ಅಸೋಸಿಯೇಷನ್ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿ ವತಿಯಿಂದ ವಿಶ್ವವಿದ್ಯಾಲಯ ಆವರಣದ ಗಂಗಾ ವಿದ್ಯಾರ್ಥಿನಿ ವಸತಿ ನಿಲಯ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ರಿಸರ್ಚ್ ಸ್ಕಾಲರ್ ವಿದ್ಯಾರ್ಥಿನಿ ಮಾತನಾಡಿ, ಸರಿಯಾದ ಸಮಯಕ್ಕೆ ಅಡುಗೆ ಮಾಡುತ್ತಿಲ್ಲ, ಸರಿಯಾದ ಗುಣಮಟ್ಟದ ಅಡಿಗೆ ಇರುವುದಿಲ್ಲ. ಮತ್ತೆ ಈ ವಸತಿಗೆ ಬೇರೆ ಬೇರೆ ವಸತಿಯಿಂದ ವಿದ್ಯಾರ್ಥಿನಿಯರು ಬಂದು ಊಟ ಮಾಡುತ್ತಾರೆ ಎಂದು ದೂರಿದರು.

ಮಹಿಳೆಯರ ವಸತಿಗೆ ಪುರುಷರು ಬರುವಂತಿಲ್ಲ ಆದರೆ, ಈ ವಸತಿಗೆ ಟೆಂಡರ್ ಪಡೆದವರ ಚಾಲಕರು, ಸೋದರ ಮತ್ತು ಪತಿ ಬಂದು ವಿದ್ಯಾರ್ಥಿನಿಯರಿಗೆ ಬಾಯಿಗೆ ಬಂದಹಾಗೆ ಮಾತಾಡುತ್ತಾರೆ ಹಾಗೂ ಹೊಡೆಯಕ್ಕೆ ಬರುತ್ತಾರೆ ಎಂದು ಹೇಳಿದ ವಿದ್ಯಾರ್ಥಿನಿಯರು, ಟೆಂಡರ್ ಪಡೆದವರನ್ನು ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು.

ಗಂಗಾ ವಿದ್ಯಾರ್ಥಿನಿ ವಸತಿ ನಿಲಯದ ವಿದ್ಯಾರ್ಥಿನಿ ಮಾತನಾಡಿ, ಸರಿಯಾದ ಸಮಯಕ್ಕೆ ನಮಗೆ ಊಟ ಸಿಗುವುದಿಲ್ಲ. ಮತ್ತೆ ಅಡಿಗೆ ಮಾಡುವರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಪಿಎಚ್ ಡಿ ವಿದ್ಯಾರ್ಥಿನಿಯರು 10 ಚಪಾತಿ ಮೇಲೆ ತಗೋತಿದ್ದಾರೆ ಎಂದು ಟೆಂಡರ್ ಪಡೆದವರ ಸೋದರರು ಟೀಕೆ ಮಾಡುತ್ತಿದ್ದಾರೆ. ರಾತ್ರಿ 10 ಗಂಟೆಗೆ ಬಂದು ಟೆಂಡರ್ಸ್ ಸೋದರರು ಮತ್ತು ಅವರ ಚಾಲಕರು ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಾರೆ ಎಂದು ಆರೋಪಿಸಿದರು.

ಇದೆ ವೇಳೆ ವಿಶ್ವವಿದ್ಯಾಲಯದ ಕುಲಸಚಿವರಿಗೆ
ಟೆಂಡರ್ ಅಮಾನತು ಗೊಳಿಸಬೇಕೆಂದು ವಿವಿ ಸಂಶೋಧನಾ ವಿದ್ಯಾರ್ಥಿಗಳ ಸಮಾಜಶಾಸ್ತ್ರ ವಿಭಾಗದ ಅಧ್ಯಕ್ಷ ಮಹಾದೇವಸ್ವಾಮಿ ಬಿ ಎಮ್ ಅವರ ನೇತೃತ್ವದಲ್ಲಿ ಮನವಿ ಪತ್ರ ನೀಡಲಾಯಿತು.

ಈ ಪ್ರತಿಭಟನೆಯಲ್ಲಿ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ಗೌತಮ ಕರಿ ಕಲ್, ಗುಲಬರ್ಗಾ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಮಹಿಳಾ ಪ್ರತಿನಿಧಿ ಸುವರ್ಣ ಬಾಬು, ಕಾರ್ಯದರ್ಶಿ ನಿಂಗಪ್ಪ, ಕಾನೂನು ಸಲಹೆಗಾರ ಬಸವರಾಜ, ಹಣಕಾಸು ಕಾರ್ಯದರ್ಶಿ ನಿತ್ಯಾನಂದ, ಮಾಧ್ಯಮ ಕಾರ್ಯದರ್ಶಿ ಶಿವಾನಂದ ಎಮ್ ವಾಲಿಕರ, ಶ್ರೀಮಂತ ಹುವಿನಹಲ್ಲಿ, ಚಂದ್ರಕಾಂತ ಆರ್, ದೇವರಾಜ ಬಾಂಡರಿ, ಭಿಮರಾಜ ಹಾಗೂ ಸಂಶೋಧನಾ ವಿದ್ಯಾರ್ಥಿನಿ ಅಮೀತಾ, ರಾಣಿ, ಜಗದೇವಿ ಹಾಗೂ ಕಾವೇರಿ ಸೇರಿದಂತೆ ವಿವಿಧ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.