ಮುಲಭೂತ ಸೌಲಭ್ಯ ಪರಿಹಾರ ನೀಡಲು ಅಧಿಕಾರಿಗಳು ವಿಳಂಬ
ಲಿಂಗಸುಗೂರು,ಜೂ.೦೮-
ತಾಲ್ಲೂಕಿನ ಕರಡಕಲ್ ಗ್ರಾಮದ ಹೊರವಲಯದಲ್ಲಿ ಇರುವ ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ಪ್ರಕಾಶ್ ರಾಂಪುರ ಇವರು ದುರ್ನಡತೆಯಿಂದ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ ವಸತಿ ನಿಲಯದಲ್ಲಿ ವಾರ್ಡನ್ ಪ್ರಕಾಶ್ ಅಂದಾ ದರ್ಬಾರ್ ಧೋರಣೆಗೆ ವಿದ್ಯಾರ್ಥಿಗಳು ನಲುಗಿದ್ದಾರೆ.
ಈ ವಾರ್ಡನ್ ಆಲ್ಕೋಡ ಮುರಾರ್ಜಿ ವಸತಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಮಾಡುವ ನೌಕರ ಏಕಾಏಕಿ ದಿಢೀರನೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಹಾಗೂ ಲಿಂಗಸುಗೂರು ಅಂಬೇಡ್ಕರ್ ವಸತಿ ನಿಲಯದ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದಾರೆ ದೈಹಿಕ ಶಿಕ್ಷಕರಾಗಿ ವೃತ್ತಿ ಮಾಡುವ ಪ್ರಕಾಶ್‌ರವರು ವಸತಿ ನಿಲಯ ಪಾಲಕರಾಗಿ ಸೇವೆ ಮಾಡುತ್ತಿರುವುದು ನಿಯಮ ಉಲ್ಲಂಘಿಸುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘಟನೆ ಸಮತಾವಾದ ಜಿಲ್ಲಾ ಕಾರ್ಯದರ್ಶಿ ದೇವರಾಜ್, ಅಮರಪ್ಪ ಇವರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿರವರಿಗೆ ಆಗ್ರಹ ಮಾಡಿದ್ದಾರೆ
ಲಿಂಗಸಗೂರು ತಾಲೂಕಿನ ವಸತಿ ನಿಲಯದಲ್ಲಿ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಹಾಗೂ ಊಟದ ಸಮಸ್ಯೆ ಅತೀಯಾಗಿದ್ದು, ಸಮಸ್ಯೆಯ ವಿಚಾರಕ್ಕೆ ಮೇಲ್ವಿಚಾರಕರಿಗೆ ಕರೆ ಮಾಡಿದರೆ ಯಾವುದೇ ಉತ್ತರ ನೀಡುತ್ತಿಲ್ಲ, ವಸತಿ ನಿಲಯದ ವಾರ್ಡನ ಆಡಳಿತ ವೈಖರಿಯಿಂದ ವಿದ್ಯಾರ್ಥಿಗಳಿಗೆ ಮುಲಭೂತ ಸೌಲಭ್ಯಗಳ ಕೊರತೆಯಿಂದ ಪರದಾಡುವಂತಾಗಿದೆ. ಈ
ವಿಚಾರವಾಗಿ ತಾಲೂಕಾಧಿಕಾರಿಗಳಿಗೆ ದೂರು ನೀಡಿದರೂ ಸಹಿತ ಅವರಿಂದ ಕೂಡ ನಮಗೆ ಯಾವುದೇ ಉತ್ತರ ಸಿಕ್ಕಿಲ್ಲ, ವಸತಿ ನಿಲಯದ ವ್ಯವಸ್ಥೆಯ ಬಗ್ಗೆ ಒಂದು ದಿನವೂ ಕೂಡ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿಲ್ಲ. ಇದಕ್ಕಿಂತ ಹೆಚ್ಚಿನದಾಗಿ ಅಧಿಕಾರಿಗಳು ಯಾರು ಕೂಡ ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ.
ಇವತ್ತಿನ ದಿನ ಮಧ್ಯಾಹ್ನದ ಊಟ ಅಡುಗೆ ಸಿಬ್ಬಂದಿಯವರು ತಯಾರಿಸಿಲ್ಲ, ಎಲ್ಲಾ ವಿದ್ಯಾರ್ಥಿಗಳು ಬರೀ ಹೊಟ್ಟೆಯಲ್ಲಿ ನಿಮ್ಮ ಮುಂದೆ ಸಮಸ್ಯೆ ಹೇಳಲು ಬಂದಿದ್ದೇವೆ. ದಯಾಮಾಡಿ ನಮ್ಮ ಸಮಸ್ಯೆಯನ್ನು ಅತೀ ಜರೂರಾಗಿ ಬಗೆಹರಿಸಬೇಕು ಎಂದು ಲಿಂಗಸುಗೂರು ಉಪ ವಿಭಾಗಾಧಿಕಾರಿ ಸಾಹಾಯಕ ಆಯುಕ್ತರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ವಾರ್ಡನ್ ಪ್ರಕಾಶ್ ಬದಲಾವಣೆ ಮಾಡಲು ಆಗ್ರಹ:
ವಸತಿ ನಿಲಯ ಪಾಲಕರನ್ನು ಕೂಡಲೇ ಬದಲಾವಣೆ ಮಾಡಲು ಮೇಲಾಧಿಕಾರಿಗಳು ಮುಂದಾಗಬೇಕು ಖಾಯಂ ನಿಲಯ ಪಾಲಕರನ್ನು ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸುವ ವಾರ್ಡನ್ ನೇಮಕ ಮಾಡಿ ಆದೇಶ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ ವಾಗಿದೆ.
ಕೂಡಲೇ ನೀಲಯ ಪಾಲಕರನ್ನು ಬದಲಾವಣೆ ಮಾಡದಿದ್ದರೆ ವಸತಿ ನಿಲಯದ ಮುಂದೆ ವಿದ್ಯಾರ್ಥಿ ಸಂಘಟನೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ
ಈ ಸಂದರ್ಭದಲ್ಲಿ ವೀರೇಶ್, ನಾಗರಾಜ್, ನಿರುಪಾದಿ, ಮಾರುತಿ, ಮೌನೇಶ್, ಅಮರೇಶ, ಸೇರಿದಂತೆ ಇನ್ನೂ ಅನೇಕ ವಿದ್ಯಾರ್ಥಿಗಳು ಇದ್ದರು.