
ಕಲಬುರಗಿ,ಆ.11:ಕಲಬುರಗಿ ನಗರದ ಸರಕಾರಿ ಬಾಲಕರ ವಸತಿ ನಿಲಯ, ಕಲಬುರಗಿ ಟೌನ ಇಲ್ಲಿನ ವಿದ್ಯಾರ್ಥಿಗಳಿಗೆ ವಸತಿ ನಿಲಯದ ವಾರ್ಡನರವರ ಗುಂಡಾಗಿರಿ ಮತ್ತು ಅಸಭ್ಯ ವರ್ತನೆಯ ಖಂಡಿಸಿ ಜೈ ಕನ್ನಡಿಗರ ಸೇನೆ ಕಾರ್ಯಕರ್ತರು ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ನಗರದ ವಸತಿ ನಿಲಯವಾದ ಸರಕಾರಿ ಬಾಲಕರ ವಸತಿ ನಿಲಯ ಕಲಬುರಗಿ ಟೌನ ಇಲ್ಲಿನ ವಾರ್ಡನರಾದ ಶ್ರೀ ಗೊಲ್ಲಾಳಪ್ಪ ವಾರ್ಡನ ಇವರು ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ ಮತ್ತು ಗುಂಡಾಗಳ ಹೆಸರನ್ನು ಹೇಳಿ ಹೆದರಿಸುವುದು ಮತ್ತು ವಿದ್ಯಾರ್ಥಿಗಳೊಂದಿಗೆ ಯಾವಾಗಲೂ ಕೋಪದಲ್ಲಿ ವರ್ತನೆ ಮಾಡುವುದು ಗುಂಡಾಗಳ ಫೆÇೀಟೊಗಳನ್ನು ತೋರಿಸಿ ವಿದ್ಯಾರ್ಥಿಗಳಿಗೆ ಹೆದರಿಸುವುದು ಏನಾದರೂ ಕೇಳಲು ಹೋದರೆ ವಿದ್ಯಾರ್ಥಿಗಳೊಂದಿಗೆ ಕೋಪದಲ್ಲಿ ವರ್ತನೆ ಮಾಡುತ್ತಿದ್ದಾರೆ.
ವಾರ್ಡನರವರು ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಸರಿಯಾಗಿ ಕಾರಣ ಪ್ರಸ್ತುತ ವಾರ್ಡನರವರು ವಸತಿ ಹೊಂದಾಣಿಕೆಯಾಗುತ್ತಿಲ್ಲ. ಅದರ ಸಲುವಾಗಿ ವಸತಿ ನಿಲಯದಿಂದ ವಜಾಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ದತ್ತು ಹೆಚ್, ಭಾಸಗಿ, ರಾಮಾ ಪೂಜಾರಿ, ಹುಸೇನ, ಯಲ್ಲೇಶ, ದೀಪಕ, ಸಿದ್ಧಾರೂಡ, ಶ್ರೀಧರ, ಶ್ರೀನಾಥ, ಸಾಗರ ಕಾಂಬಳೆ, ಅನೀಲ ತಳವಾರ, ಆನಂದ ಕೊಳ್ಳೂರ ಸೇರಿದಂತೆ ಕಾರ್ಯಕರ್ತರು ಇದ್ದರು.