ವಸತಿ ನಿಲಯದ ಅಡುಗೆ ಕಾರ್ಮಿಕ ಸಾವು : ಶವ ಸಂಸ್ಕಾರಕ್ಕೆ ಪರಿಹಾರ ನೀಡದೆ ನಿಯಮ ಉಲ್ಲಂಘನೆ

ದುರುಗಪ್ಪ ಹೊಸಮನಿ
ಲಿಂಗಸುಗೂರು : ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನಡೆಯುತ್ತಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಆದರೆ ತಾಲ್ಲೂಕಿನ ವಿವಿಧ ವಸತಿ ನಿಲಯದ ನೇಮಕಾತಿ ಮಾಡುವ ಮೂಲಕ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಹಾಗೂ ಈ ವಸತಿ ನಿಲಯಗಳಿಗೆ ೧೫೦ ಜನ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ರಾಯಚೂರು ಜಿಲ್ಲೆಯ ಎಆರ್‌ಸಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.
ಈ ಸಂಸ್ಥೆಯವರು ೨೦೧೮ ರಿಂದ ೨೦೨೨ ರವರಗೆ ಗುತ್ತಿಗೆ ಪಡೆದುಕೊಂಡಿದ್ದಾರೆ. ಆದರೆ ಸಂಸ್ಥೆಯ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ ಕಾರ್ಮಿಕರ ಹೆಸರಿನಲ್ಲಿ ಲಕ್ಷಾಂತರ ಹಣ ಲೂಟಿ ಮಾಡುವ ಮೂಲಕ ತಮ್ಮ ಅಟ್ಟಹಾಸ ಮೆರೆದಿದ್ದಾರೆ.ತಾಲ್ಲೂಕಿನ ವಸತಿ ನಿಲಯದ ಕಾರ್ಮಿಕರು ಸತ್ತರೆ ಶವ ಸಂಸ್ಕಾರಕ್ಕೆ ಪರಿಹಾರ ನೀಡದ ಸಂಸ್ಥೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕಾರ್ಮಿಕ ನೌಕರರ ಮರಣ ಹೊಂದಿದರೆ ಅಂತ್ಯಕ್ರಿಯೆಗೆ ನೆರವಾಗುವಂತೆ ಕಾರ್ಮಿಕ ಇಲಾಖೆಯ ಕಾಯ್ದೆ ಪ್ರಕಾರ ಸರ್ಕಾರ ಕಾಯಿದೆ ಜಾರಿಗೆ ತಂದಿದೆ.
ಆದರೆ ರಾಯಚೂರು ಜಿಲ್ಲೆಯ ಎಆರ್‌ಸಿ ಸಂಸ್ಥೆಯವರು ಇಲ್ಲಿ ಸಂಪೂರ್ಣವಾಗಿ ಕಾರ್ಮಿಕ ಕಾಯ್ದೆ ಉಲ್ಲಂಘಿಸಿದೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ತಾಲ್ಲೂಕಿನ ಅಂಬೇಡ್ಕರ್ ವಸತಿ ನಿಲಯದ ಅಡುಗೆ ಸಾಹಾಯಕ ಹೇಮಣ್ಣ ಕಿಡ್ನಿ ವೈಫಲ್ಯದಿಂದ ದಿನಾಂಕ ೧೫-೦೭-೨೦೨೨ ರಂದು ಮರಣ ಹೊಂದಿದ್ದಾರೆ ಹಾಗೂ ಇದೆ ರೀತಿ ಗುರಗುಂಟಾ ವಸತಿ ನಿಲಯದ ಅಡುಗೆ ಸಾಹಾಯಕ ಹನುಮಂತ ಮತ್ತು ಕಳೆದ ಎರಡು ವರ್ಷಗಳ ಹಿಂದೆ ಅಂದರೆ ಮಧು ಎಂಬ ಯುವಕ ಅಂಬೇಡ್ಕರ್ ವಸತಿ ನಿಲಯದ ಅಡುಗೆ ಸಾಹಾಯಕ ಎಂದು ಕೆಲಸ ಮಾಡುವ ಮೂಲಕ ಸೇವೆ ಸಲ್ಲಿಸಿದ್ದಾರೆ ಇದರಲ್ಲಿ ಮಧು ಎಂಬ ಯುವಕ ೨೦೧೯ ರಲ್ಲಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ.
ಈ ಸಂಸ್ಥೆಯವರು ಕಾರ್ಮಿಕರಿಗೆ ಕನಿಷ್ಠ ಶವ ಸಂಸ್ಕಾರಕ್ಕೆ ಪರಿಹಾರ ನೀಡದೆ ಈ ಮೂರು ಕುಟುಂಬಗಳಿಗೆ ಅನ್ಯಾಯ ಮಾಡಿದೆ ಎಂಬುದು ಕುಟುಂಬದ ಸದಸ್ಯರು ಈ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಆರ್‌ಸಿ ಅಂದರೆ iಟಿsಣiಣuಣe oಜಿ iಟಿಜಿoಡಿmಚಿಣioಟಿ ಣeಛಿhಟಿoಟogಥಿ ಜeಠಿಚಿಡಿಣmeಟಿಣ ಐಣಜ ಡಿಚಿiಛಿhuಡಿ ಸಂಸ್ಥೆ
ರಾಯಚೂರು ಜಿಲ್ಲೆಯ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಸಂಸ್ಥೆ ಲಿಂಗಸುಗೂರು ತಾಲ್ಲೂಕಿನ ವಸತಿ ನಿಲಯದ ಕಾರ್ಮಿಕರಿಗೆ ಕಾಯಿದೆ ಪ್ರಕಾರ ವೇತನ ನೀಡದೆ ಕಾರ್ಮಿಕರ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಾರ್ಮಿಕರು ತಮ್ಮ ನೋವನ್ನು ಸಂಜೆವಾಣಿ ಪತ್ರಿಕೆ ವರದಿಗಾರರು ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಮಿಕ ಮಹಿಳೆಯೊಬ್ಬರು ಮನದಾಳದ ಮಾತುಗಳನ್ನು ಆಡುವ ಮೂಲಕ ಎಆರ್‌ಸಿ ಸಂಸ್ಥೆಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಸತಿ ನಿಲಯದ ಅಡುಗೆ ಸಿಬ್ಬಂದಿಗಳಿಗೆ ವೇತನ ಹೆಚ್ಚಳ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನೀಡದೆ ತೊಂದರೆ ಅನುಭವಿಸುವಂತಾಗಿದೆ. ಕಾರ್ಮಿಕರಿಗೆ ರಕ್ಷಣೆಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅನೇಕ ರೀತಿಯ ಆಡಳಿತದಲ್ಲಿ ಕಾರ್ಮಿಕರಿಗೆ ರಕ್ಷಣೆಗಾಗಿ ಯೋಜನೆ ಜಾರಿಗೆ ತಂದಿದೆ ಇಂತಹ ಸಂಸ್ಥೆಗಳು ಇರುವುದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ.
ಜಿಎಸ್‌ಟಿ ಹೆಸರಿನಲ್ಲಿ ವಸತಿ ನಿಲಯದ ಕಾರ್ಮಿಕರ ವೇತನ ಕಟ್ಟ್ ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ವಸತಿ ನಿಲಯದ ಅಡುಗೆ ಸಾಹಾಯಕ ಕಾರ್ಮಿಕರಿಗೆ ಈಗಿರುವ ವೇತನಕ್ಕೆ ಸಮಾನ ವೇತನ ನೀಡಬೇಕು ಎಂಬುದು ಆದೇಶ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮಾಡಿದ್ದಾರೆ.
ಈ ಸಂಸ್ಥೆ ಯವರು ಮೂಲ ವೇತನದ ಹೆಚ್ಚಳ ಮಾಡದೆ ಮೊದಲು ಇದ್ದ ವೇತನ ನೀಡಿ ಕೈ ತೊಳೆದುಕೊಂಡು ಕಣ್ಣು ಮುಚ್ಚಿಕೊಂಡು ಕುಳಿತು ಕೊಳ್ಳುವ ಮೂಲಕ ಕಾರ್ಮಿಕರ ಹಣ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ಕಾಣಬಹುದು. ಹೊಸದಾಗಿ ಮೂಲ ವೇತನದ ಹೆಚ್ಚಳ ಪ್ರಕಾರ ಅಡುಗೆ ಸಾಹಾಯಕ ಕಾರ್ಮಿಕರಿಗೆ ೧೬. ೭೦೦ರೂಪಾಯಿ ಮತ್ತು ಅಡುಗೆ ಸಿಬ್ಬಂದಿಗೆ ೧೬.೨೦೦ ರೂ.ರಾತ್ರಿ ಕಾವಲು ಪಡೆಯವರಿಗೆ ೧೬.೦೦೦ ರೂ.ಯಂತೆ ಈಗಿರುವ ವೇತನ ಹೆಚ್ಚಳ ಇಷ್ಟೇಲ್ಲಾ ಸರ್ಕಾರದ ನಿಯಮ ಪ್ರಕಾರ ಕಾರ್ಮಿಕರಿಗೆ ವೇತನ ನೀಡಬೇಕು ಎಂಬುದು ಆದೇಶ ವಿದ್ದರೂ ಕೂಡ ಜಿಲ್ಲೆಯ ಜಿಲ್ಲಾಡಳಿತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಾಹಾಯಕ ನಿರ್ದೇಶಕರು ಎಆರ್‌ಸಿ ಸಂಸ್ಥೆಯವರ ಜೊತೆ ಕೈಜೋಡಿಸಿ ಕಾರ್ಮಿಕರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ.
ಕಾರ್ಮಿಕರ ಹೆಸರಿನಲ್ಲಿ ಲಕ್ಷಾಂತರ ಹಣ ಲೂಟಿ ಮಾಡುವ ಈ ಸಂಸ್ಥೆ ವಿರುದ್ಧ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಶಾಮೀಲಾಗಿರುವ ತಾಲ್ಲೂಕಿನ ಸಾಹಾಯಕಾ ನಿರ್ದೇಶಕರ ಬಗ್ಗೆ ತಾಲ್ಲೂಕಿನ ವಿವಿಧ ವಸತಿ ನಿಲಯದ ಆರೋಪ ಕೇಳಿಬಂದಿದೆ ಕೂಡಲೇ
ಇಂತಹ ಸಂಸ್ಥೆಗಳು ಇರುವುದರಿಂದ ಸಾಮಾನ್ಯ ಜನರ ಹಣ ಲೂಟಿ ಮಾಡುವ ಮೂಲಕ ಅಧಿಕಾರಿಗಳು ಕೇಲಸ ಮಾಡಿದ್ದಾರೆ ಎಂದು ಪ್ರಗತಿಪರ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ ಮತ್ತು ಉಪಾಧ್ಯಕ್ಷ ಬೀಮೇಶ ಎಲ್ ನಾಯಕ ಇವರು ತನಿಖೆಗೆ ಒತ್ತಾಯಿಸಿದ್ದಾರೆ.
ಇನ್ನು ಎಆರ್‌ಸಿ ಸಂಸ್ಥೆಯವರ ಕರ್ಮಕಾಂಡ ಹಾಗೂ ಅನ್ಯಾಯಕ್ಕೆ ಒಳಗಾದ ವಸತಿ ನಿಲಯದ ನೇಮಕಾತಿ ಮಾಡಿಕೊಳ್ಳಲು ಅಕ್ರಮ ಬಯಲಿಗೆ ಎಳೆ ಎಳೆಯಾಗಿ ಕರ್ಮಕಾಂಡದ ಬಗ್ಗೆ ವಿಶೇಷ ವರದಿ ಮಾಡಲು ಮುಂದಾಗಿದೆ.