ವಸತಿ ನಿಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಜೇವರ್ಗಿ,ಏ.22-ಪಟ್ಟಣದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನೇಣು ಹಾಕಿಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಿರಾಳ (ಬಿ) ಗ್ರಾಮದ ಸಿದ್ದು ಶಿವಪ್ರಸಾದ ತಂದೆ ಶಿವಕುಮಾರ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ನಿನ್ನೆ ರಾತ್ರಿ ವಸತಿ ನಿಲಯದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದುಬಂದಿಲ್ಲ.
ಸುದ್ದಿ ತಿಳಿದು ಸಿಪಿಐ ಭೀಮನಗೌಡ, ಪಿಎಸ್‍ಐ ಶಿವರಾಜ ಪಾಟೀಲ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಶಾಸಕ ಅಜಯ್ ಸಿಂಗ್ ಭೇಟಿ
ವಸತಿ ನಿಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿದು ಶಾಸಕ ಡಾ.ಅಜಯಸಿಂಗ್, ಮುಖಂಡರಾದ ರಾಜಶೇಖರ ಸೀರಿ, ಗುರು ಸುಬೇದಾರ, ರವಿ ಕೋಳಕಾರ, ಬಿಜೆಪಿ ಮುಖಂಡರಾದ ಮಹೇಶ ಪಾಟೀಲ ರದ್ದೇವಾಡಗಿ, ಯುವ ಮುಖಂಡರಾದ ಅನೀಲ ದೊಡ್ಡಮನಿ, ಶಿವಲಿಂಗಪ್ಪಗೌಡ ಭೇಟಿ ನೀಡಿದರು.