
ಬೀದರ, ಸೆ.10: ಗೌರವಾನ್ವಿತ ನಾಯಮೂರ್ತಿಗಳಾದ ಕೆ.ಎನ್.ಘಣಿಂದ್ರ ಉಪಲೋಕಾಯುಕ್ತರು ಬೆಂಗಳೂರು ಅವರು ಸೆಪ್ಟೆಂಬರ್ 3 ರಂದು ಮಧ್ಯಾಹ್ನ ಬ್ರೀಮ್ಸ್ ಆಸ್ಪತ್ರೆ, ಬಾಲಭವನ ಮೈಲೂರ ಬೀದರ ಜನವಾಡ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕಿಯರ ವಸತಿ ಗೃಹ, ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕಿಯರ ವಸತಿ ಗೃಹಗಳಿಗೆ ಭೇಟಿ ನೀಡಿರುತ್ತಾರೆ.
ಗೌರವಾನ್ವಿತ ಉಪಲೋಕಾಯುಕ್ತರು ಅವರು ಬ್ರಿಮ್ಸ್ ಆಸ್ಪತ್ರೆಯ ಭೇಟಿಯ ವೇಳೆ ರೋಗಿಗಳಿಗೆ ವಿಚಾರಿಸಿರುತ್ತಾರೆ, ವೈದ್ಯಾಧಿಕಾರಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮತ್ತು ಸ್ವಚ್ಚತೆ ಬಗ್ಗೆ ಪರಿಶೀಲನೆ ಮಾಡಿರುತ್ತಾರೆ. ಹಾಸ್ಟಲ್‍ಗಳಲ್ಲಿ ಭೇಟಿ ನೀಡಿ ಬಾಲಕಿಯರಿಗೆ ಊಟದ ವ್ಯವಸ್ಥೆ, ಲೈಬ್ರರಿ, ಬುಕ್ಸ್, ಡ್ರೆಸ್, 10ನೇ ವಿದ್ಯಾರ್ಥಿಗಳಿಗೆ ಕೋಚಿಂಗ, ಬೆಡ್ ಮತ್ತು ಬೆಡಶಿಟ್‍ಗಳ ಬಗ್ಗೆ ವಿಚಾರಿಸಿ ಅಲ್ಲಿನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿರುತ್ತಾರೆ.