ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಬಾಲರಾಜ್ ಗುತ್ತೇದಾರ

ಸೇಡಂ,ಡಿ, 07: ತಾಲೂಕಿನ ಕೊಡ್ಲಾ ಗ್ರಾಮದ ಕಿತ್ತೂರಿ ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆಗೆ ಜೆಡಿಎಸ್ ಯುವ ಮುಖಂಡರಾದ ಬಾಲರಾಜ್ ಗುತ್ತೇದಾರ ಅವರು ಭೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆಯನ್ನು ಆಲಿಸಿದರು.
ವಸತಿ ನಿಲಯಕ್ಕೆ ಭೇಟಿ ನೀಡಿದಾಗ ವಸತಿ ನಿಲಯ ನಿರ್ವಹಣೆಯಲ್ಲಿ ನಿರ್ಲಕ್ಷ ಮಾಡುತಿರುವುದರ ಕುರಿತು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ವಿದ್ಯಾರ್ಥಿನಿಯರು ದೂರಿದರು. ಈ ವೇಳೆ ಬಾಲರಾಜ್ ಗುತ್ತೇದಾರ ಅವರು ಇಲಾಖೆಯ ಜಂಟಿ ನಿರ್ದೇಶಕರಿಗೆ ಅಲ್ಲಿಂದಲೇ ದೂರವಾಣಿ ಇಂದ ಸಂಪರ್ಕಿಸಿ ಆದಷ್ಟು ಬೇಗನೆ ಮಕ್ಕಳ ಬೇಡಿಕೆಯನ್ನು ಈಡೇರಿಸಿ ಎಂದು ಮನವಿ ಮಾಡಿದರು, ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು ಆದಷ್ಟು ಬೇಗ ಇದರ ಕುರಿತು ಕ್ರಮಕೈಗೋಳ್ಳಲಾಗುವುದು ಎಂದು ಭರವಸೆ ನೀಡಿದರು, ಈ ವಿಷಯ ವಿದ್ಯಾರ್ಥಿನಿಯರಿಗೆ ತಿಳಿಸಿದಾಗ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಲ್ಲಿರುವ ಸಿಬ್ಬಂದಿಗಳೊಂದಿಗೆ ಮಾತನಾಡಿ ಮತ್ತೇನಾದರೂ ಸಮಸ್ಯೆ ಇದ್ದರೆ ತಿಳಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ, ಶಿವರಾಮರೆಡ್ಡಿ ಮುದೋಳ, ಜಗನ್ನಾಥ ರೆಡ್ಡಿ ಗೊಟೂರ್, ಹಣಮಯ್ಯ ಗುತ್ತೇದಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು .