ಜೇವರ್ಗಿ :ಜು.16:ಪಟ್ಟಣದ ಹೊರವಲಯದ ಕಲಬುರಗಿ ರಸ್ತೆಯಲ್ಲಿರುವ ಅಸಂಖ್ಯಾತರ ವಸತಿ ನಿಲಯಕ್ಕೆ ಶಾಸಕ ಡಾಕ್ಟರ್ ಅಜಯ್ ಸಿಂಗ್ ನೀಡಿ ವಿದ್ಯಾರ್ಥಿಗಳೊಂದಿಗೆ ಅಡುಗೆ ಕೋಣೆ, ಶೌಚಾಲಯ, ಸ್ನಾನಗ್ರಹ, ಉಪಹಾರ ಪರಿಶೀಲಿಸಿ ಅವ್ಯವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸ್ಥಳದಲ್ಲಿ ದೂರವಾಣಿ ಮುಖಾಂತರ ಸಂಪರ್ಕಿಸಿ ಸೂಕ್ತ ಕ್ರಮಕ್ಕೆ ಸೂಚಿಸಲಾಯಿತು.
ಶೌಚಾಲಯದಲ್ಲಿ ನೀರಿಲ್ಲ, ಸ್ನಾನಗೃಹದಲ್ಲಿ ಬಿಸಿನೀರಿನ ವ್ಯವಸ್ಥೆ ಇಲ್ಲ ಕಳಪೆ ಊಟ ನೀಡಲಾಗುತ್ತಿತ್ತು. ಇಲ್ಲಿ ಎರಡು ವಸತಿ ನಿಲಯಗಳಿದ್ದರೂ ನೌಕರರು ಬರುತ್ತಿಲ್ಲ.ಆರುಜನ ಅಡುಗೆ ಸಿಬ್ಬಂದಿಗಳಿದ್ದರೂ ಎರಡು ವಸತಿ ನಿಲಯಗಳ ಮಧ್ಯೆ ಕೇವಲ ಮೂವರು ಅಡುಗೆ ಸಿಂಬಂಧಿ ಬರುತ್ತಿದ್ದಾರೆ.
ಅಧಿಕಾರಿಗಳಿಗೆ ಈ ವಸತಿ ನಿಲಯಗಳು ಸುಧಾರಿಸಬೇಕು ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ಕಲ್ಪಿಸಬೇಕು. ಸರ್ಕಾರ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹಲವಾರು ಯೋಜನೆಗಳನ್ನು ರೂಪಿಸಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ನಿಮ್ಮಂತಹ ಅಧಿಕಾರಿಗಳಿಂದ ಸರ್ಕಾರದ ಯೋಜನೆಗಳು ಸಾಕಾರಗೊಳ್ಳುತ್ತಿಲ್ಲ, ವಿದ್ಯಾರ್ಥಿಗಳ ಗುಣಮಟ್ಟದ ಊಟ ಹಾಗೂ ಸೌಲಭ್ಯಗಳಲ್ಲಿ ಕೊರತೆ ಕಂಡುಬಂದರೆ ಮುಲಾಜಿಲ್ಲದೇ ಅಮಾನತು ಮಾಡಲು ಆದೇಶಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಲಾಯಿತು.