ವಳವಂಡವಾಡಿ 9.90ಕೋಟಿ ವೆಚ್ಚದ ಕೆರೆ ನಿರ್ಮಾಣಕ್ಕೆ ಪೂಜೆ

ಆಳಂದ: ಜ.12:ಅಧಿಕಾರಕ್ಕೆ ಬಂದ ಮೇಲೆ ಅಂತರ್ಜಲ ಹೆಚ್ಚಳ ಹಾಗೂ ನೀರಾವರಿ ಕಾಮಗಾರಿಗಳಿಗೆ ಕ್ಷೇತ್ರದಲ್ಲಿ ಕೆರೆ, ಗೋಕಟ್ಟೆ ಚೆಕ್‍ಡ್ಯಾಂ ಹೀಗೆ ಸುಮಾರು 200 ಕೋಟಿ ರೂಪಾಯಿ ಅನುದಾನ ತರುವ ಮೂಲಕ ಅಂತರ್ಜಲ ಕಾಮಗಾರಿಗಳ ಕಾರ್ಯರೂಪಕ್ಕೆ ತಂದಿದ್ದು ನಾನೇ ಆದರೆ ಹಿಂದಿನ ಶಾಸಕರು ಏನೂ ಮಾಡದೆ ಸುಳ್ಳು ಹೇಳಿದ್ದಾರೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಹೇಳಿದರು.

ತಾಲೂಕಿನ ಒಳವಂಡವಾಡಿ ಗ್ರಾಮದಲ್ಲಿ ಬುಧವಾರ ಸಣ್ಣ ನೀರಾವರಿ ಇಲಾಖೆಯ 10 ರೂಪಾಯಿ ಕೋಟಿ ವೆಚ್ಚದಲ್ಲಿ ನೀರಾವರಿ ಕೆರೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿ ಅವರು ಮಾತನಾಡಿದರು.

ಹಿಂದಿನ ಶಾಸಕರು (ಬಿಆರ್.ಪಾಟೀಲ) 400 ಕೆರೆಗಳು ಮಾಡುವುದಾಗಿ ಒಂದೂ ಸಹ ಮಾಡದೆ ಜನತೆಗೆ ಸುಳ್ಳು ಹೇಳಿ ಮೋಸಮಾಡಿದ್ದಾರೆ. ಆದರೆ ನಾನು ಅಧಿಕಾರಕ್ಕೆ ಬಂದ ಮೇಲೆ ಮಾಜಿ ಸಿಎಂ ಬಿಎಸ್‍ವೈ ಹಾಗೂ ಸಿಎಂ ಬೊಮ್ಮಾ ಅವರಿಗೆ ಕೇಳಿದಷ್ಟು ಅನುದಾನ ನೀಡಿದ್ದರಿಂದ ಸಣ್ಣ ನೀರಾವರಿ ಇಲಾಖೆ ಮೂಲಕ ಆರು ಹೊಸ ಕೆರೆ ನಿರ್ಮಾಣ, ಗೋಕಟ್ಟೆ, ಬ್ರೀಜ್ ಕಂ ಬ್ಯಾರೇಜ್‍ನಂತರ ಕಾಮಗಾರಿಗೆ 114 ಕೋಟಿ ಅನುದಾನ ತಂದಿದ್ದು, ಇದರಲ್ಲಿ ಕೆಲವು ಕಾಮಗಾರಿ ಪ್ರಗತಿಯಲಿವೆ, ಕೆಲವು ಮುಕ್ತಾಯಗೊಂಡಿದ್ದು , ಕೆಲವು ಕಾಮಗಾರಿಗಳ ಸದ್ಯದಲೇ ಪ್ರಾರಂಭಗೊಳ್ಳಲಿವೆ. ಇದಕ್ಕೆ ಹೊರತಾಗಿಯೂ ಜಿಡಗಾ ಮಠದ ಶ್ರೀಗಳು ನೀಡಿದ ನಿವೇಶನದಲ್ಲಿ 80 ಕೋಟಿ ವೆಚ್ಚದಲ್ಲಿ ಕೆರೆ ಹಾಗೂ ಮಧ್ಯಮ ನೀರಾವರಿ ಇಲಾಖೆಯ ಭೀಮಾನದಿಯಿಂದ ಅಮರ್ಜಾ ಅಣೆಕಟ್ಟೆಗೆ ನೀರು ತರುವ ಮಾರ್ಗಮಧ್ಯದ ಹೊಸದಾಗಿ 8 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ 49.50 ಕೋಟಿ ರೂಪಾಯಿ ಮಂಜುರಾಗಿದೆ. ಈ ಕಾಮಗಾರಿಯಿಂದ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ನಿವಾರಣೆ ಜೊತೆಗೆ ನೀರಾವರಿಗೆ ಅನುಕೂಲ ಒದಗಿಸಲು ಶ್ರಮಿಸಲಾಗಿದೆ ಎಂದರು.

ವಳವಂಡವಾಡಿ ಗ್ರಾಮದಲ್ಲಿ ಕೆರೆ ನಿರ್ಮಾಣದಿಂದ ನೆರೆಯ ಮೂರ್ನಾಲ್ಕು ಹಳಿಯ ರೈತರಿಗೆ ವರವಾಗಲಿದೆ. ರೈತರ ಅನುಕೂಲಕ್ಕಾಗಿ ನೀರಾವರಿ ಅಂತರ್ಜಲಕ್ಕೆ ಒತ್ತುಕೊಟ್ಟಿದ್ದು, ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಗ್ರಾಮದ ಸಂಪರ್ಕ ಆರು ಕಿ.ಮೀ ರಸ್ತೆ ಹಾಗೂ ಕಣ್ಮಸ್ ಗ್ರಾಮ ಸಂಪರ್ಕಕ್ಕೆ ಬ್ರೀಜ್ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಇಲಾಖೆಯ ಎಇಇ ಶಾಂತಪ್ಪ ಜಾಧವ ಅವರು ಮಾತನಾಡಿ, ಶಾಸಕರ ಅವಿರತ ಪ್ರಯತ್ನದಿಂದಾಗಿ 9.90 ಕೋಟಿ ವೆಚ್ಚದಲ್ಲಿ 5 ಕೋಟಿ ಭೂ ಸ್ವಾಧೀನ ಮಾಡಿಕೊಂಡ ರೈತರಿಗೆ ಹಣ ನೀಡುವುದು ಹಾಗೂಇನ್ನೂಳಿದ ಅನುದಾನದಲ್ಲಿ ಎಡ,ಬಲ ಕಾಲುವೆ ಒಳಗೊಂಡು ಕೆರೆ ಕಾಮಗಾರಿಗೆ ನಡೆಯಲಿದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ಹೇಳಿದರು.

ಇದೇ ವೇಳೆ ಕೆರೆ ನಿರ್ಮಾಣಕ್ಕೆ ಜಮೀನು ನೀಡಿದ ನಾಗೇಂದ್ರ ಬಟ್ಟರಗಿ, ಸುಬ್ಬಣ್ಣ ಸೇರಿದಂತೆ ಇತರ ರೈತರಿಗೆ ಶಾಸಕರು ಸನ್ಮಾನಿಸಿದರು. ಪ್ರತಿಯಾಗಿ ಗ್ರಾಮಸ್ಥರು ಶಾಸಕರನ್ನೂ ವಿಶೇಷ ಸನ್ಮಾನ ಕೈಗೊಂಡರು.

ಕೆಎಂಎಫ್ ನಿರ್ದೇಶಕ ಸಂತೋಷ ಗುತ್ತೇದಾರ, ಚಂದ್ರಕಾಂತ ಭೂಸನೂರ, ಗ್ರಾಪಂ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಾನೋಳೆ, ಮುಖಂಡ ಶ್ರೀನಿವಾಸ್ ಗುತ್ತೇದಾರ, ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿದ್ರಾಮಪ್ಪ ಬಿರಾದಾರ, ಸಿದ್ಧುಗೌಡ ಎಸ್. ಪಾಟೀಲ, ಅಶೋಕ ಹತ್ತರಕಿ, ಬಸವರಾಜ ಬಟ್ಟರಗಿ, ಶಿವಲಿಂಗಪ್ಪ ದಳಪತಿ ಬಾಲಖೇಡ, ಮಕ್ಕಾಜಿ ಆರ್. ಪಾಟೀಲ, ತಾಂತ್ರಿಕ ಅಧಿಕಾರಿ ವೀರೇಶ, ಅನೀಲ ಸೇರಿದಂತೆ ಗ್ರಾಮಸ್ಥರು ಹಾಗೂ ನೆರೆ ಹೊರೆಯ ಗ್ರಾಮಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.