ವಲ್ಲಭಬಾಯಿ ಪಟೇಲ ಏಕತೆಯ ಹರಿಕಾರ : ಡಾ. ಜಿ.ಕೃಷ್ಣಮೂರ್ತಿ


ಧಾರವಾಡ ನ.04-: ‘ವಲ್ಲಭಬಾಯಿ ಪಟೇಲ ಏಕತೆಯ ಹರಿಕಾರ’ ಎಂದು ಪ್ರಾಚಾರ್ಯ ಡಾ. ಜಿ.ಕೃಷ್ಣಮೂರ್ತಿ ಅವರು ಹೇಳಿದರು. ಸ್ಥಳೀಯ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಮಾನವ ಹಕ್ಕುಗಳ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ‘ರಾಷ್ಟ್ರೀಯ ಏಕತಾ ದಿವಸ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ ಅವರು ‘ಅಕ್ಟೋಬರ್-31 ರಂದು ಸರ್ದಾರ ವಲ್ಲಭಬಾಯಿ ಪಟೇಲರ ಜನ್ಮ ದಿನದ ಪ್ರಯುಕ್ತ ಕೇಂದ್ರ ಸರಕಾರ 2014 ರಿಂದ ಈ ದಿನವನ್ನು ‘ರಾಷ್ಟ್ರೀಯ ಏಕತಾ ದಿವಸ’ ಎಂದು ಆಚರಿಸಲಾಗುತ್ತಿದೆ.
ಸರ್ದಾರ ವಲ್ಲಭಬಾಯಿ ಪಟೇಲ ಅವರು ‘ಖೇಡಾ’ ಸತ್ಯಾಗ್ರಹದ ಮೂಲಕ ರಾಜಕೀಯವನ್ನು ಪ್ರವೇಶಿಸಿ, ಮಹಾತ್ಮ ಗಾಂಧೀಜಿಯವರ ಕಟ್ಟಾ ಅನುಯಾಯಿಗಾಗಿ ಬಾರ್ಡೋಲಿ ಸತ್ಯಾಗ್ರಹದಲ್ಲಿ ಜನರಿಂದ ‘ಸರ್ದಾರ’ ಎಂಬ ಬಿರುದನ್ನು ಪಡೆದುಕೊಂಡು ಭಾರತದ ಸಂವಿಧಾನದ ರಚನೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಸ್ವತಂತ್ರ ಭಾರತದ ಪ್ರಥಮ ಉಪಪ್ರಧಾನಿ ಹಾಗೂ ಗೃಹಸಚಿವರಾಗಿ ಭಾರತದ ಸಂಸ್ಥಾನಗಳ ವಿಲೀನಕ್ಕಾಗಿ ಶ್ರಮಿಸಿ, 562 ಸಂಸ್ಥಾನಗಳನ್ನು ಭಾರತದ ಒಕ್ಕಟೂದಲ್ಲಿ ಸೇರಿಸಲು ಯಶಸ್ಸನ್ನು ಪಡೆದು ಏಕತೆಯ ಹರಿಕಾರರಾಗಿದ್ದಾರೆ. ಒಂದು ದೇಶದ ಬೆಳವಣಿಗೆಯಲ್ಲಿ ಎಲ್ಲರೂ ಒಂದುಗೂಡಿ ಶ್ರಮಿಸಿದರೆ ಯಶಸ್ಸು ಖಂಡಿತ ಎಂದು ಸ್ವಯಂಸೇವಕರಿಗೆ ಹೇಳಿದರು.
ಸಮಾರಂಭದಲ್ಲಿ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ. ಎಸ್.ಕೆ. ಸಜ್ಜನ, ಡಾ. ಆರ್.ಟಿ. ಮಹೇಶ, ಮಾನವ ಹಕ್ಕುಗಳ ಸಂಘದ ಚೇರಮನ್ ಡಾ. ಆರ್.ವ್ಹಿ. ಚಿಟಗುಪ್ಪಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಜಿನೇಂದ್ರ ಕುಂದಗೋಳ, ಆರ್.ಸಿ. ಮಠಪತಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.