ಶಹಾಪುರ,ಜು.29-ವಲ್ರ್ಡ್ ವಿಷನ್ ಸಂಸ್ಥೆಯ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾದವು ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ವಲ್ರ್ಡ್ ವಿಷನ್ ಸಂಸ್ಥೆಯಿಂದ ಸರಕಾರಿ ಪ್ರಾಥಮಿಕ ಶಾಲೆಗೆ ಬೆಂಚ್ ಹಾಗೂ ಡೆಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಆಹಾರ ಧಾನ್ಯಗಳ ಕಿಟ್ ಹಾಗೂ ಟಿಫನ್ ಬಾಕ್ಸ್ ವಿತರಿಸಿ ಮಾತನಾಡಿದರು.
ಇದೇ ವೇಳೆ ಮಕ್ಕಳಿಗೆ ವೈಯಕ್ತಿಕ ಸಂರಕ್ಷಣೆ, ಪುಸ್ತಕ ಹಾಗೂ ಸರ್ಕಾರಿಯೋಜನೆಗಳ ಮಾಹಿತಿ ಪುಸ್ತಕಗಳ ಬಿಡುಗಡೆ ಮಾಡಲಾಯಿತು.
ವಲ್ರ್ಡ್ ವಿಷನ್ ಸಂಸ್ಥೆ ಮತ್ತು ಶಾಲೆಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.