ವಲ್ರ್ಡ್ ವಿಷನ್ ಇಂಡಿಯಾದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ಬಳ್ಳಾರಿ, ಮೇ 28: ವಲ್ರ್ಡ್ ವಿಷನ್ ಇಂಡಿಯಾ ವತಿಯಿಂದ ಬಳ್ಳಾರಿ ಗ್ರಾಮಾಂತರ ಪ್ರದೇಶಗಳಲ್ಲಿ ತಲಾ ಎರಡು ಸಾವಿರ ಮೊತ್ತದ 111 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಗುರುವಾರ ವಿತರಿಸಲಾಯಿತು.
ಕರೋನಾ ಸಂದರ್ಭದಲ್ಲಿ ಬಡಕುಟುಂಬಗಳಿಗೆ ಜೀವನ ಕಷ್ಟಕರವಾಗಿರುವುದನ್ನು ಮನಗಂಡು ಆಹಾರ ಕಿಟ್‍ಗಳನ್ನು ವಿತರಿಸಲಾಗಿದೆ. ಇದರಲ್ಲಿ 11 ಕುಟುಂಬಗಳಿಗೆ ಕರೋನ ಪಾಸಿಟಿವ್ ಇದ್ದು ಅವರಿಗೂ ಸಹ 6ಕೆಜಿ ತೊಗರಿ ಬೇಳೆ, 6ಕೆಜಿ ಗೋಧಿ ಹಿಟ್ಟು, 6ಕೆಜಿ ಜೋಳ ಮತ್ತು 6ಕೆಜಿ ಅಡುಗೆ ಎಣ್ಣೆ ಯನ್ನು ಒಳಗೊಂಡ ಕಿಟ್ಟನ್ನು ವಿತರಣೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ವಲ್ರ್ಡ್ ವಿಷನ್ ಇಂಡಿಯಾ ವ್ಯವಸ್ಥಾಪಕರಾದ ಪ್ರೇಮಲತಾ ಹಾಗೂ ಸಿಬ್ಬಂದಿ ಹಾಜರಿದ್ದರು.