ವಲ್ರ್ಡವೈಡ್ ಬುಕ್ ಆಫ್ ರಿಕಾಡ್ರ್ಸ ಸಾಧನೆ

ಕಲಬುರಗಿ,ಆ.13:ಇಂಗ್ಲೇಡ ಕೊಡಮಾಡುವ ಪ್ರತಿಷ್ಠಿತ ಸಾಧನೆಯ ಗರಿಯಾದ “ವಲ್ರ್ಡವೈಡ್ ಬುಕ್ ಆಫ್ ರಿಕಾಡ್ರ್ಸ” “Worldwide Book of Records” ಸಾಧನೆಗೆ ಕಲಬುರಗಿಯ ಯೋಗ ಶಿಕ್ಷಕರಾದ ಶ್ರೀಮತಿ. ಶಿಲ್ಪಾ ಅನಂತ ಕಪಾಟೆ ಭಾಜನರಾಗಿದ್ದಾರೆ.
ದಿನಾಂಕ: 13ನೆ ಜುಲೈ 2023 ರಂದು ಸಾಧನೆಯ ಪಟ್ಟಿಯಲ್ಲಿ ಆಯ್ಕೆಗೊಂಡು, ದಿನಾಂಕ: 11ನೆ ಆಗಷ್ಟ 2023 ಕೊನೆಯ ಸುತ್ತಿನಲ್ಲಿ ಸಾಧನೆಗೆ ಪರಿಗಣಿಸಲಾಗಿದೆ. ಈ ಪುರಸ್ಕಾರವು ಪ್ರಮಾಣ ಪತ್ರ ಹಾಗೂ ಫಲಕವನ್ನು ಒಳಗೊಂಡಿದೆ.
ಯೋಗ ಕ್ಷೇತ್ರದಲ್ಲಿ “ವಲ್ರ್ಡವೈಡ್ ಬುಕ್ ಆಫ್ ರಿಕಾಡ್ರ್ಸ” ಸಾಧನೆಯನ್ನು ಮಾಡಿದ ಶೀಮತಿ ಶಿಲ್ಪಾ ಕಪಾಟೆಯವರು ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲಿಗರಾಗಿದ್ದಾರೆ. ಸರ್ವಾಂಗಾಸದಿಂದ ಹಲಾಸನವನ್ನು ಅತೀ ಹೆಚ್ಚು ಸಮಯ ಅಭ್ಯಾಸ ಹಾಗೂ ಅವಧಿಯನ್ನು ಪರಿಗಣಿಸಿ ಈ “ವಲ್ರ್ಡವೈಡ್ ಬುಕ್ ಆಫ್ ರಿಕಾಡ್ರ್ಸ” ಸಾಧನೆಗಾಗಿ ಪರಿಗಣಿಸಲಾಗಿದೆ.
ಶ್ರೀಮತಿ. ಶಿಲ್ಪಾ ಅನಂತ ಕಪಾಟೆ ರವರು ಈ ಸಾಧನೆಗೆ ಭಾಜನರಾಗಿದ್ದು ಸಂತಸದ ಸಂಗತಿಯಾಗಿದ್ದು, ತುಂಬಾ ಸಂತೋಷವನ್ನುಂಟಮಾಡಿದೆ. ಇವರು ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಭೂಮಿ ಯೋಗ ಫೌಂಡೇಶನ್ ಟ್ರಸ್ಟನ್ ಅಧ್ಯಕ್ಷರಾದ, ನಾಗರಾಜ ಆರ್. ಸಾಲೋಳ್ಳಿ, ಕಾರ್ಯದರ್ಶಿಗಳಾದ ಶ್ರೀಮತಿ. ವಿಶಾಲಾಕ್ಷಿ ಬಿ. ಘಂಟಿ, ಡಾ. ಬಸವರಾಜ ಕಪಾಟೆ, ಹಾಗೂ ಅನಂತ ಕಪಾಟೆ, ಕುಟುಂಬದ ಸದಸ್ಯರು ಹಾಗೂ ಸಮಸ್ತ ಆಡಳಿತ ಮಂಡಳಿ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.