ಸಿಂದನೂರು,ಜೂ.೨೪-
ಮಲೇರಿಯಾ ರೋಗವು ರೋಗವಾಹಕ ಅನಾಫಿಲಸ್ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಗ್ರಾಮೀಣ ಜನರು ಚಳಿ ಜ್ವರ ಎಂದು ಕರೆಯುವರು ಮನುಷ್ಯನಲ್ಲಿ ಕಂಡುಬರುವ ಮಲೇರಿಯಾ ಪ್ಲಾಸ್ಮೋಡಿಯಂ ಪರಾವಲಂಭಿ ಸೂಕ್ಷ್ಮಾಣುಜೀವಿ ಯು ಮನುಷ್ಯನ ಯುಕ್ರುತನಲ್ಲಿ ಶೇಖರಣೆಯಾಗಿ ಬೆಳೆದು ಬಾಧೆಯು ಕಾಣುತ್ತದೆ ಎಂದು ತಾಲುಕಾ ಮಲೇರಿಯಾ ಮೇಲ್ವಿಚಾರಕರಾದ ಎಫ್.ಎ.ಹಣಗಿ ಹೇಳಿದರು.
ತಾಲ್ಲೂಕಿನ ವಲ್ಕಂದಿನ್ನಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಡಿಜಿಟಲ್ ಮಾದ್ಯಮ ಬಳಸಿ ಮಲೇರಿಯಾ ಮಾಸಾಚರಣೆ ಕಾರ್ಯ ಗಾರ ದಲ್ಲಿ ಪಾಲ್ಗೊಂಡ ಮಾತನಾಡಿದ ಅವರು ಈ ರೋಗ ಮಾರಣಾಂತಿಕವಲ್ಲದಿದ್ದರೂ ಮನುಷ್ಯನ ಆರೋಗ್ಯದಲ್ಲಿ ವಿಪರೀತ ದುಷ್ಪರಿಣಾಮ ಉಂಟು ಮಾಡುತ್ತೇದೆ ಎಂದರು.
ಮಲೇರಿಯಾ ರೋಗವು ರಕ್ತದ ಪ್ಲಾಸ್ಮಾ ತಿಂದು ಬದುಕುವದರಿಂದ ಮನುಷ್ಯನ ದೇಹದಲ್ಲಿ ಅನೇಕ ವ್ಯತ್ಯಾಸವಾಗುತ್ತದೆ ಉದಾಹರಣೆಗೆ ಗರ್ಭಿಣಿ ಸ್ತ್ರೀ ಗೆ ಮಲೇರಿಯಾ ಬಂದರೆ ರಕ್ತಹೀನತೆ ಯಾಗಿ ಸರಿಯಾದ ಮುಂಜಾಗ್ರತಾ ಅಥವಾ ರೋಗ ನಿರ್ದಾರ ವಾಗದೆ ಹೋದರೆ ಕ್ರಮೇಣ ರಕ್ತ ಕಡಿಮೆಯಾಗಿ ರಕ್ತಹೀನತೆ ಯ ಜೊತೆಗೆ ರೋಗದ ಉಲ್ಬಣ ಹೆಚ್ಚಾಗಿ ಹೊಟ್ಟೆಯಲ್ಲಿನ ಮಗು ಮತ್ತು ತಾಯಿಯ ಮರಣದ ಸಂಭವಗಳು ಇರುತ್ತದೆ ಅದಕ್ಕಾಗಿ ಯಾರೂ ಮಲೇರಿಯಾ ಜ್ವರದ ಕುರಿತ ನಿರ್ಲಕ್ಷ ಮಾಡಬಾರದು ಎಂದರು.
ಮಲೇರಿಯಾ ರೋಗಾಣುವನ್ನು ೧೮೮೦ ನವೆಂಬರ್ ೬ ರಂದು ಕಂಡು ಹಿಡಿಯಲಾಗಿದ್ದು ದೇಶದಲ್ಲಿ ೧೦ ವರ್ಷದ ಹಿಂದೆ ಸರಾಸರಿ ವಾರ್ಷಿಕ ೧೫ ಲಕ್ಷ ಪ್ರಕರಣಗಳು ಕಂಡುಬರುತ್ತಿದ್ದವು ಕ್ರಮೇಣ ಆರೋಗ್ಯ ಇಲಾಖೆಯ ಸತತ ಪ್ರಯತ್ನ ಮತ್ತು ಲಾರ್ವಾಸಮೀಕ್ಷಾ ಕಾರ್ಯ ಹಾಗೂ ಜ್ವರ ಸಮೀಕ್ಷೆಯ ಜೊತೆಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳಿಂದ ತಾಲುಕಿನ ಮೇಲ್ವಿಚಾರಕ ತಂಡ ಜಾಗ್ರತೆ ಹಾಗೂ ನಿರಂತರ ಪರಿಶ್ರಮ ದಿಂದ ಮಲೇರಿಯಾ ಜ್ವರದ ಬಾಧೆಯ ಪ್ರಕರಣಗಳು ಕಂಡು ಬಂದಿಲ್ಲ ಎಂದರು.
ತಾಲೂಕಿನಾದ್ಯಂತ ಮೈಗ್ರೇಟೆಡ್ ಪ್ರಕರಣಗಳು ಅಂದರೆ ವಲಸಿಗ ಪ್ರಕರಣಗಳು ಮಲೇರಿಯಾ ರೋಗ ಕಂಡುಬಂದಿದ್ದು ಮುಂಜಾಗ್ರತಾ ಕಾರ್ಯ ನಿರಂತರ ಅವಶ್ಯಕ ಎ ಮಲೇರಿಯಾ ರೋಗದಲ್ಲಿ ೩ ಪ್ರಮುಖ ಲಕ್ಷಣಗಳು ಇದ್ದು ಚಳಿಯ ಹಂತ,ಬಿಸಿಯ/ಜ್ವರದ ಹಂತ,ಬೆವರುವಿಕೆಯ ಹಂತ ವಿದ್ದು ವಿಪರೀತ ತಲೆನೋವು,ಜ್ವರ,ಹಣೆಯ ಭಾಗ ಬಹಳಷ್ಟು ಸುಡುವುದು ಸೇರಿ ವಿಪರೀತ ಬೆವರು ಇತ್ಯಾದಿ ಲಕ್ಷಣಗಳು ಇರುತ್ತವೆ.ಆದ್ದರಿಂದ ಯಾರು ಮಲೇರಿಯಾ ಜ್ವರದ ಬಗ್ಗೆ ನಿರ್ಲಕ್ಷ್ಯ ಮಾಡದೆ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಮಲೇರೀಯಾ ಬಾರದಂತೆ ನೋಡಿಕೊಳ್ಳಬೇಕು ಎಂದು ಎಪ್, ಎ,ಹಣಗಿ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ತಾಲುಕಾ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಗೀತಾ ಹಿರೇಮಠ, ಆರೋಗ್ಯ ಇಲಾಖೆಯ ಪಕೀರ ಚಂದ, ಶರಣಮ್ಮ, ಹಮೀದ, ಅಮೀರ, ಶಾಲಾ ಎಸ್ ಡಿ.ಎಂ.ಸಿ ಅಧ್ಯಕ್ಷ ರಾದ ಬಸವರಾಜ, ಶಿಕ್ಷಕರಾದ ಸುನಂದ, ಗೌರಮ್ಮ, ಎಸ್ ಮೇರುಜಾ, ಸಿದ್ದಲಿಂಗಮ್ಮ, ರತ್ನಮ್ಮ ಸೇರಿದಂತೆ ಶಾಲೆಯ ಮುಖ್ಯ ಗುರುಗಳು ಗ್ರಾಮಸ್ಥರು, ಶಾಲಾ ಮಕ್ಕಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.