ವಲಸೆ ಬಂದವರ ನಿಗಾವಹಿಸಿರಿ-ತಹಶೀಲ್ದಾರ್

ಕುರುಗೋಡು, ಮೇ.02: ಕೋರೋನಾ 2ನೇ ಅಲೆಯ ಹಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ಕುರಿತು ಸಮೀಪದ ಕಲ್ಲುಕಂಬ ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ. ಮಟ್ಟದ ಪ್ರಗತಿಪರಿಶೀಲನೆ ಸಭೆಯನ್ನು ಆಯೋಜಿಸಲಾಗಿತ್ತು.
ಕುರುಗೋಡು ತಹಶೀಲ್ದಾರ್ ರಾಘವೇಂದ್ರರಾವ್ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಕೋವಿಡ್ 2ನೇ ಅಲೆ ಹೆಚ್ಚಾಗಿದೆ. ಆದ್ದರಿಂದ ಗ್ರಾಮಕ್ಕೆ ಬೇರೆಊರಿನಿಂದ ಬಂದ ವಲಸಿಗರ ಮೇಲೆ ಗ್ರಾ.ಪಂ. ಪಿಡಿಒ, ಅಂಗನವಾಡಿ, ಮತ್ತು ಆಶಾಕಾರ್ಯಕರ್ತೆಯರು ನಿಗಾವಹಿಸಿ ಚಿಕಿತ್ಸೆ ನೀಡುವಲ್ಲಿ ಮುಂದಾಗಬೇಕೆಂದು ಸಲಹೆ ನೀಡಿದರು. ಇದರಲ್ಲಿ ಆಯಾ ವಾರ್ಡುಗಳ ಗ್ರಾ.ಪಂ. ಸದಸ್ಯರ ಪಾತ್ರ ಸಹ ಮುಖ್ಯವಾಗಿದೆ.ತಮ್ಮ ವಾರ್ಡುಗಳಲ್ಲಿ ಸೋಂಕಿತರ ಪತ್ತೆ ಹಚ್ಚುವುದು ತಮ್ಮ ಜವಾಬ್ದಾರಿ ಎಂದು ಗ್ರಾಪಂ. ಸದಸ್ಯರಿಗೆ ಸಲಹೆ ನೀಡಿದರು. ಸರ್ಕಾರ ಕೋರೋನಾ ಸೋಂಕನ್ನು ಕಟ್ಟಿಹಾಕಲು ಲಾಕ್‍ಡೌನ್ ನಿಯಮವನ್ನು ಜಾರಿಗೊಳಿಸಿದೆ. ಇದರ ಪಾಲನೆಯನ್ನು ಸಹ ತಾವುಗಳೆಲ್ಲರೂ ಗ್ರಾಮಮಟ್ಟದಲ್ಲಿ ಕಟ್ಟುನಿಟ್ಟಾಗಿ ಪಾಲಿಸಿ, ಕೋರೋನಾ ನಿಯಂತ್ರಣಕ್ಕೆ ಎಲ್ಲರೂ ಪ್ರಯತ್ನ ಮಾಡಬೇಕು ನುಡಿದರು.
ಕುರುಗೋಡು ತಾ.ಪಂ.ವ್ಯವಸ್ಥಾಪಕ ಅನಿಲ್ ಮಾತನಾಡಿ, ಗ್ರಾ.ಪಂ.ದಿಂದ ಜರುಗುವ ಉದ್ಯೋಗಖಾತ್ರಿಯೋಜನೆಅಡಿಯಲ್ಲಿ ಕೆಲಸಮಾಡುವ ಕಾರ್ಮಿಕರು ಸಮಾಜಿಕ ಅಂತರಕಾಯ್ದುಕೊಳ್ಳಬೇಕು, ಆಗಾಗ್ಗೆ ಸಾಬೂನಿನಿಂದ ಕೈಗಳನ್ನು ತೊಳೆದುಕೊಂಡು ಸ್ವಚ್ಚತೆಯಿಂದ ಇರಬೇಕೆಂದು ತಿಳಿಸಿದರು. ಕಲ್ಲುಕಂಬ ಗ್ರಾ.ಪಂ. ಪಿಡಿಒ. ದೇವರಾಜ್ ಸಭೆಯಲ್ಲಿ ಎಲ್ಲರನ್ನು ಸ್ವಾಗತಿಸಿದರು. ಕರವಸೂಲುಗಾರ ಮಲ್ಲೇಶಪ್ಪ ವಂದಿಸಿದರು. ಸಭೆಯಲ್ಲಿ ಗ್ರಾ.ಪಂ. ಅದ್ಯಕ್ಷ, ಉಪಾದ್ಯಕ್ಷ, ಸದಸ್ಯರು, ಅಂಗನವಾಡಿ, ಆಶಾಕಾರ್ಯಕರ್ತೆಯರು, ಊರಿನ ಮುಖಂಡರು ಇದ್ದರು.