
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.15 :- ಉದ್ಯೋಗ ಹರಸಿ ಅನೇಕ ನಿರುದ್ಯೋಗಿ ಯುವಕರು ಬೆಂಗಳೂರು ಸೇರಿದಂತೆ ಇತರೆಡೆ ಗುಳೇ ಹೋಗುತ್ತಿದ್ದು ಕೋವಿಡ್ ಸಂದರ್ಭದಲ್ಲಿ ಮನೆ ಸೇರಿದ ನಿರುದ್ಯೋಗಿ ಯುವಕರು ಕೃಷಿಯನ್ನು ಅವಲಂಬಿಸಿದ್ದರಿಂದ ತಮಗಿರುವ ಮೂರ್ನಾಕು ಎಕರೆ ಜಮೀನನಲ್ಲಿ ಕೊರೆಸಿರುವ ಕೊಳವೆ ಬಾವಿ ನೀರಿನಿಂದ ಬೆಳೆದ ರೇಷ್ಮೆ ಬೆಳೆ ತಾಲೂಕಿನ ಜನಗಮಸೋವೇನಹಳ್ಳಿ ನಿರುದ್ಯೋಗಿ ಯುವಕರ ಕೈಹಿಡಿದು ಗುಳೇ ಹೋಗುವುದನ್ನು ತಪ್ಪಿಸಿದೆ.
ಮಳೆ, ಪ್ರಕೃತಿ ವೈಪರೀತ್ಯದಿಂದ ಕೃಷಿಯಿಂದ ವಿಮುಖರಾಗಿ ಉದ್ಯೋಗ ಹರಿಸಿ ಪಟ್ಟಣ ಪ್ರದೇಶಗಳಿಗೆ ವಲಸೆ ಹೋದ ಅದೆಷ್ಟೋ ನಿರುದ್ಯೋಗಿ ಯುವಕರಿಗೆ ಕೋವಿಡ್ ಇನ್ನಷ್ಟು ಸಂಕಷ್ಟದಲ್ಲಿರುವಂತೆ ಮಾಡಿತು ಇಂತಹ ಸಂದರ್ಭದಲ್ಲಿ ದಿಕ್ಕೆ ತೋಚದಂತಾಗಿದ್ದ ನಮ್ಮ ಬದುಕಿಗೆ ವರದಾನವಾಗಿದ್ದು ರೇಷ್ಮೆ ಕೃಷಿ ಎನ್ನುತ್ತಾರೆ ಬಹುತೇಕ ಉದ್ಯೋಗ ಹರಿಸಿ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಪಿ ಯು ಸಿ, ಐ ಟಿ ಐ, ಡಿಪ್ಲೊಮಾ, ಡಿಗ್ರಿ ಪಡೆದ ಯುವ ಕೃಷಿಕರು.
ಬಹುತೇಕ ರೈತ ಕುಟುಂಬಗಳು ನಾಲ್ಕೈದು ಎಕರೆ ವಿಸ್ತೀರ್ಣವುಳ್ಳ ಜಮೀನಿನಲ್ಲಿ ಸುಮಾರು ಎರಡು ಎಕರೆಗೆ ಇಪ್ಪು ನೇರಳೆ ಬೇಸಾಯ ಮಾಡಿ ಸರ್ಕಾರದ ಸೌಲಭ್ಯವನ್ನು ಅಂದರೆ ನರೇಗಾ ಯೋಜನೆ ರೇಷ್ಮೆ ಇಲಾಖೆಯ ಸಹಾಯ ಪಡೆದು ಕಚ್ಛಾ ರೇಷ್ಮೆ ಗೂಡುಗಳನ್ನು ಉತ್ಪಾದಿಸುವ ಮುಖಾಂತರ ಗ್ರಾಮದ ರೈತರು ಉದ್ಯೋಗ ಕಂಡುಕೊಂಡಿದ್ದಾರೆ
ತಮ್ಮ ಎರಡು ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಇಪ್ಪು ನೇರಳೆ ಸಸಿಗಳನ್ನು ಸಾಲಿನಿಂದ ನಾಲ್ಕು ಅಡಿ ಗಿಡದಿಂದ ಗಿಡಕ್ಕೆ ಮೂರು ಅಡಿ ಅಂತರದಲ್ಲಿ ಸಸಿಗಳನ್ನು ನಾಟಿ ಮಾಡಿ ಸಸಿಗಳಿಗೆ ರಾಸಾಯನಿಕಗಳನ್ನು ಬಳಸದೆ ಜೈವಿಕ ಹಾಗು ನೈಸರ್ಗಿಕ ಸಾರವರ್ದಿತ ಸಾವಯವ ರಸಗೊಬ್ಬರಗಳನ್ನ ಬಳಕೆ ಮಾಡಿ ಸತ್ವಯುತ ಉತ್ತಮ ಉತ್ಕೃಷ್ಟ ಗುಣಮಟ್ಟದಲ್ಲಿ ಹಿಪ್ಪೆನೇರಳೆ ಬೆಳೆದು ರೇಷ್ಮೆ ಹುಳುಗಳಿಗೆ ಆಹಾರ ವಾಗುವಾಗುವಂತೆ ಬೆಳೆಸುತ್ತಿದ್ದಾರೆ.
ರೇಷ್ಮೆ ಚಾಕಿ ಸೆಂಟರ್ ನಿಂದ ಸಂಸ್ಕರಿತ ರೇಷ್ಮೆ ಹುಳುಗಳನ್ನು ಪ್ರತಿ ಎಕರೆ ಜಮೀನುನಲ್ಲಿರುವ ಹಿಪ್ಪೆನೀರೆಳೆಗೆ 150 ರಿಂದ 200 ಮೊಟ್ಟೆಯನ್ನು ಖರಿದಿಸುತ್ತಾರೆ (ಒಂದು ಮೊಟ್ಟೆಯಲ್ಲಿ ಅಂದಾಜು 350 ರಿಂದ 400 ಸಂಸ್ಕರಿಸಿದ ರೇಷ್ಮೆ ಹುಳುಗಳು) ಎರಡನೇ ಹಂತದ ಜ್ವರ ನಿಲ್ಲಿಸುವ ನಂತರ ರೇಷ್ಮೆಹುಳುಗಳನ್ನು ರೇಷ್ಮೆ ಫಾರ್ಮ್ ಹೌಸ್ ಗೆ ಮನೆಗೆ ತಂದು ನಂತರ ರೇಷ್ಮೆ ಹುಳುಗಳನ್ನು ಮೂರನೇ ನಾಲ್ಕನೇ ಜ್ವರ ಹೀಗೆ ರೇಷ್ಮೆ ಗೂಡು ಕಟ್ಟುವ ಹಂತದವರೆಗೆ ತೀವ್ರ ನಿಗಾವಹಿಸಿ ಸೂಕ್ಷ್ಮ ವಾತಾವರಣದಲ್ಲಿ ಬಹಳ ಪರಿಶ್ರಮ ಶ್ರದ್ಧೆಯಿಂದ ನುರಿತ ರೇಷ್ಮೆ ತಂತ್ರಜ್ಞರ ಸಲಹೆ ಸಹಾಯ ಪಡೆದು ಉತ್ತಮ ಗುಣಮಟ್ಟ ಉಳ್ಳ ಕಚ್ಚಾ ರೇಷ್ಮೆ ಗೂಡು ಉತ್ಪಾದಿಸುವ ಮುಖಾಂತರ ಗುಣಮಟ್ಟದ ಇಳುವರಿಯನ್ನು ಕಾಯ್ದುಕೊಂಡು ಸ್ವಲ್ಪ ವ್ಯತ್ಯಯವಾದರು ರೇಷ್ಮೆ ಹುಳುಗಳ ಗೂಡು ಕಟ್ಟದೆ ಮಾಡಿದ ಖರ್ಚು ವೆಚ್ಚವನ್ನು ಭರಿಸಲಾಗದೆ ರೇಷ್ಮೆ ಕೃಷಿಕರ ಕನಸು ಕಮುರುವಂತ ಅಪಾಯದ ಸಾವಾಲಿನ ಮಧ್ಯೆ ಸಾಧನೆ ಮುಟ್ಟಬೇಕಾಗಿದೆ.
ಪ್ರಸ್ತುತ 200 ರೇಷ್ಮೆ ಮೊಟ್ಟೆಯಲ್ಲಿ ರೇಷ್ಮೆ ಕೃಷಿಕ 180 ರಿಂದ 200ಕೆಜಿಯವರೆಗೆ ಗುಣಮಟ್ಟದ ಇಳುವರಿಯನ್ನ ಪಡೆದುಕೊಂಡು ರೇಷ್ಮೆ ಕೃಷಿಯಲ್ಲಿ ಮಾದರಿಯಾಗಿದ್ದಾರೆ ಪ್ರತಿ ಕೆ.ಜಿ ಕಚ್ಚಾ ರೇಷ್ಮೆ ಗೂಡಿಗೆ ಕನಿಷ್ಟ ಐದು ನೂರು ರೂಪಾಯಿ ಸಿಕ್ಕರು ಒಂದು ಲಕ್ಷ ರೂಪಾಯಿಗಳನ್ನು ಸಂಪಾದಿಸಬಹುದು ಕೂಲಿ ಇನ್ನಿತರ ಖರ್ಚು ವೆಚ್ಚಗಳು ಸೇರಿ 20ಸಾವಿರದಿಂದ 30 ಸಾವಿರ ವರೆಗೆ ಖರ್ಚಾದರೂ 70ಸಾವಿರ ರೂನಷ್ಟು ಉಳಿಕೆ ಮಾಡಬಹುದು ವರ್ಷಕ್ಕೆ ಏನಿಲ್ಲವೆಂದರು 2 ಎಕರೆ ಪ್ರದೇಶದಲ್ಲಿ ಕನಿಷ್ಠ ಎಂಟರಿಂದ ಒಂಬತ್ತು ಬೆಳೆಗಳನ್ನ ಬೆಳೆಯಬಹುದು ವಾರ್ಷಿಕವಾಗಿ ಕನಿಷ್ಠ 5 ಲಕ್ಷ ಸಂಪಾದಿಸಬಹುದು ವಡೇರಹಳ್ಳಿ ಬಸವರಾಜ್
ಉಪ್ಪಾರ್ ಅಂಜಿನಪ್ಪಗೌಡರ ಜಯಣ್ಣವಡೆರಳ್ಳಿ ಶರಣಪ್ಪ ಎನ್ ಕೊಟ್ರೇಶ, ಜಗದೀಶ್, ಕಡೆಮನಿ ತಿಂದಪ್ಪ, ಸಿಎಂ ಮಲ್ಲಿಕಾರ್ಜುನ, ವಿರುಪಾಕ್ಷ,, ಸಾಹುಕಾರ ವೀರಣ್ಣ, ಕೆ ಗಣೇಶ್, ಗೊಲ್ಲರ ರಾಘವೇಂದ್ರ, ಕೋಡಿ ಮಲ್ಲಿಕಾರ್ಜುನ, ಎಂ ತಿಪ್ಪೇಸ್ವಾಮಿ, ಸಿಎಂ ಚಿನ್ನಪ್ಪ, ಬಾರಿಕರ ಸಂಗಪ್ಪ,
ಎ ಚನ್ನಪ್ಪ, ಕೆ ಚನ್ನಬಸಪ್ಪ, ಗಂಗಾನಹಳ್ಳಿ ಸಿದ್ದೇಶ ಎನ್ನುವ ನಿರುದ್ಯೋಗಿ ಯುವಕರೇ ರೇಷ್ಮೆ ಕೃಷಿಯಿಂದ ವಲಸೆ ತಪ್ಪಿಸಿಕೊಂಡು ಬದುಕು ಕಟ್ಟಿಕೊಂಡ ಯುವಕರ ಮಾತಾಗಿದೆ.
ಈಗ ರಾಮನಗರ ರೇಷ್ಮೆ ಮಾರುಕಟ್ಟೆ ರೇಷ್ಮೆ ಮಾರಾಟ ಮಾಡತ್ತಿದ್ದು ಮಾರಟದಲ್ಲಿ ಪಾರದರ್ಶಕತೆ ಸ್ಪರ್ಧಾತ್ಮಕ ಧರ ನೀಡಲು ಈ – ಹರಾಜು,ಈ – ಪೇಮೆಂಟ್ ಜಾರಿ ಮಾಡುವ ಮುಖಾಂತರ ರೇಷ್ಮೆ ಕೃಷಿಕರಿಗೆ ಅರ್ಥಿಕ ಚೈತನ್ಯ ನೀಡಿದೆ ಮತ್ತು ರೇಷ್ಮೆ ಬೆಳೆಗಾರರಿಗೆ ರೇಷ್ಮೆ ಬೆಳೆಗೆ ಕನಿಷ್ಟ ಬೆಲೆ ಸಹಾಯಧನ ಹೆಚ್ಚಿಸುವುದು ರೇಷ್ಮೆಗೂಡು ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದರ ಮುಖಾಂತರ ರೈತರ ನೆರವಿಗೆ ಬರಬೇಕಾಗಿದೆ ಎನ್ನುತ್ತಾರೆ ಗ್ರಾಮದ ಯುವ ಕೃಷಿಕರು.