
ಸಿಂಧನೂರು,ಫೆ.೨೬- ಅಮ್ಮ ಮಗನ ಪಕ್ಷ ಕಾಂಗ್ರೆಸ್ ಅಪ್ಪ ಮಕ್ಕಳ ಪಕ್ಷ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದೆ ಇಲ್ಲಿ ಎಲ್ಲರು ನಾಯಕರಾಗಿ ಬೆಳಯಲು ಅವಕಾಶ ಇದೆ ಎಂದು ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷರಾದ ನಳೀನ ಕುಮಾರ ಕಟೀಲು ವ್ಯಂಗ್ಯ ಮಾಡಿದರು.
ನಗರಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶ ವಿಭಜನೆ, ತೃಷ್ಷಿಕರಣ ರಾಜಕಾರಣ ಮಾಡುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಿದೆ ಇವರ ಅಧಿಕಾರ ಅವಧಿಯಲ್ಲಿ ದೇಶ ಅಬಿವೃದ್ಧಿ ಯಾಗಿಲ್ಲ ಪರಿವಾರಕ್ಕೆ ಬಿಜೆಪಿ ತಿಲಾಂಜಲಿ ನೀಡಿದೆ ಎಂದರು.
ಕಾಂಗ್ರೆಸ್ ಪಕ್ಷದ ಅಧಿಕಾರದ ಅವಧಿಯಲ್ಲಿ ದೇಶದ ಪ್ರಧಾನಿಯಾದ ಲಾಲ್ ಬಹಾದ್ದೂರ ಶಾಸ್ತ್ರೀಯನ್ನು ಹೊರತು ಪಡಿಸಿ ನೆಹರು, ಮನಮೋಹನ ಸಿಂಗ, ನರಸಿಂಹ ರಾವ್, ಇಂದಿರಾಗಾಂಧಿ ರಾಜೀವ ಗಾಂಧಿ, ಇತರರು ಪ್ರಧಾನಿಗಳಾಗಿದ್ಧಾಗ ದೇಶದ ಅಭಿವೃದ್ಧಿ ಮಾಡದೆ ಬರಿ ಭ್ರಷ್ಟಾಚಾರ ಮಾಡುವ ಭ್ರಷ್ಟಾಚಾರದ ಪಕ್ಷ ಕಾಂಗ್ರೆಸ್ ಎನ್ನುವಂತಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಹಲ್ಲು ಇಲ್ಲದ ಎಸಿಬಿ ಯನ್ನು ತಂದು ತಾವು ಮಾಡಿದ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಿ ಕೊಂಡರು ೪೦/ ಸರ್ಕಾರ ಎನ್ನುವ ಇವರು ಯಾಕೆ ಇಲ್ಲಿತನಕ ದೂರು ದಾಖಲಿಸಲಿಲ್ಲ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ನನ್ನು ಬಳಸಿಕೊಂಡು ದೂರು ನೀಡಿದರು ಆದರೆ ದೂರು ನೀಡಿದ ಕೆಂಪಣ್ಣ ಜೈಲಿಗೆ ಹೋದ ಮುಂದೆ ಸಿದ್ಧ ರಾಮಯ್ಯ ಸಹ ಜೈಲಿಗೆ ಹೋಗುವ ಕಾಲ ದೂರ ಇಲ್ಲ ಎಂದರು.
ಜೆಡಿಎಸ್ ಮುಖಂಡ ಕೆ. ಮರಿಯಪ್ಪ ಹಾಗೂ ಅವರ ಅಭಿಮಾನಿಗಳನ್ನು ಸಂತೋಷದಿಂದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಮುಂದೆ ಅವರು ಸಿಹಿ ಸುದ್ದಿ ಯನ್ನು ಕೊಡುತ್ತಾರೆ. ಸಿಂಧನೂರಿನಲ್ಲಿ ಕಮಲ ಹರಳುತ್ತದೆ ರಾಜ್ಯದಲ್ಲಿ ಬಿಜೆಪಿ ಪರ ಜನರ ಹಲೆ ಇದೆ ಮುಂದೆ ಮತ್ತೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವದು ಸತ ಸಿದ್ದ ಎಂದರು.
ಬಿಜೆಪಿಯಲ್ಲಿ ಎಷ್ಟೇ ಬಣಗಳಿರಲಿ ಹೈಕಮಾಂಡ ನಿರ್ಧಾರ ದಂತೆ ನಾವು ನಡೆದುಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇವೆ ನನ್ನ ಮೇಲೆ ಅಭಿಮಾನ ಇಟ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಬಂದಿದ್ದಕ್ಕೆ ನನಗೆ ಸಂತೋಷವಾಗಿದೆ. ತಾಲೂಕಿನಲ್ಲಿ ಕಮಲ ಹರಳುಸುವ ಕೆಲಸ ಮಾಡೋಣ ಎಂದು ಕೆ. ಮರಿಯಪ್ಪ ಮಾತನಾಡಿದರು.
ಕೆ. ಮರಿಯಪ್ಪ, ವೆಂಕೋಬ ನಾಯಕ ರಾಮತ್ನ್ನಾಳ, ಸೇರಿದಂತೆ ಹಲವು ಜನರು ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲಿಗರೊಂದಿಗೆ ಸೇರ್ಪಡೆಯಾದರು ಬಿಜೆಪಿ ಮುಖಂಡರಾದ ಮಹೇಶ ತೆಂಗಿನ ಕಾಯಿ, ಸಿದ್ದು ರಾಜ್. ಕೆ.ವಿರೂಪಾಕ್ಷಪ್ಪ. ಕೊಲ್ಲಾ ಶೇಷಗಿರಿರಾವು, ಮಧ್ವಾಚಾರ್ಯ, ಪ್ರತಾಪ ಪಾಟೀಲ, ಚಂದ್ರಶೇಖರ ಗೌಡ, ಅಮರೆಗೌಡ, ಶಶಿಕಲಾ ಆದಿಮನಿ, ವೀರಲಕ್ಷ್ಮಿ ಹನುಮೇಶ ಸಾಲಗುಂದಾ, ದೊಡ್ಡ ಬಸವರಾಜ, ಇರೇಶ ಇಲ್ಲೂರು, ರಾಜೇಶ ಹಿರೇಮಠ, ಕೆ.ಹನುಮೇಶ ಸೇರಿದಂತೆ ಇತರರು ವೇದಿಕೆಯ ಮೇಲೆ ಇದ್ದರು.