ವಲಸಿಗರ,ಅನಾಥರ ರಕ್ಷಣೆ ಸರ್ಕಾರದ್ದು

ಆನೇಕಲ್, ಸೆ. ೧೮: ಬೀದಿ ಬದಿ ವ್ತಾಪಾರಿಗಳೆಂದರೆ ಅನಾಥರು, ಬೇರೆ ಕಡೆಯಿಂದ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಜನ, ಅವರಿಗೆ ರಕ್ಷಣೆ ಕೊಡಬೇಕಾಗುವುದು ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಜವಬ್ದಾರಿಯಾಗಿದೆ ಎಂದು ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ರಾಷ್ಠೀಯ ಉಪಾಧ್ಯಕ್ಷರಾದ ಡಾ,ಎಂ.ವೆಂಕಟಸ್ವಾಮಿ ತಿಳಿಸಿದರು.
ದೊಡ್ಡ ತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿರುವ ಅದಿಕಾರಿಗಳ ವರ್ತನೆ ಖಂಡಿಸಿ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾ ಮತ್ತು ಸಮತಾ ಸೈನಿಕ ದಳ ಮತ್ತು ದಲಿತ ಸಂಘರ್ಷ ಸೇನೆ ಹಾಗೂ ಬೆಂಗಳೂರು ನಗರ ರಸ್ತೆ ಬದಿ ವ್ಯಾಪಾರಿಗಳ ಸಂಘದ ಸಹಯೋಗದಲ್ಲಿ ನೀಲಾದ್ರಿ ರಸ್ತೆಯಿಂದ ದೊಡ್ಡ ತೋಗೂರು ಗ್ರಾಮ ಪಂಚಾಯಿತಿ ವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಾರತದ ಪ್ರಜೆಯಾದವನು ಎಲ್ಲಿ ಬೇಕಾದರೂ ಬದುಕು ಕಟ್ಟಿಕೊಳ್ಳುವ ಹಕ್ಕನ್ನು ಅಂಬೇಡ್ಕರ್ ರವರು ರಚಿಸಿರುವ ಸಂವಿದಾನದಲ್ಲಿ ಕಾನೂನು ಅಡಕವಾಗಿದೆ, ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಎಲ್ಲಾ ರೀತಿಯಾದ ಸೌಲಭ್ಯಗಳನ್ನು ಸರ್ಕಾರಗಳು ಒದಗಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ ಆದರೆ ದೊಡ್ಡ ತೋಗೂರು ಗ್ರಾಮ ಪಂಚಾಯಿತಿ ಅದಿಕಾರಿಗಳು ಮತ್ತು ಪೋಲಿಸರು ಸುಮಾರು ೫೦ ಬೀದಿ ಬದಿ ವ್ಯಾಪಾರಿಗಳ ಕುಟುಂಬವನ್ನು ಒಕ್ಕಲೆಬ್ಬಿಸಿರುವುದು ಎಷ್ಠು ಸರಿ ಇದೆ ಎಂದು ಹೇಳಿದರು.
ನಾವು ಬ್ರ್ರಿಟೀಷರ ಆಡಳಿತದಲ್ಲಿ ಇದ್ದೇವೆಯೋ ಅಥವ ಅಂಬೇಡ್ಕರ್ ರವರ ಸಂವಿಧಾನದ ಪ್ರಜಾ ಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ ಎಂಬುದು ತಿಳಿಯಲಾಗಿದ್ದು, ಕೂಡಲೇ ನೀಲಾದ್ರಿ ರಸ್ತೆಯ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ದೊಡ್ಡ ತೋಗೂರು ಗ್ರಾಮ ಪಂಚಾಯಿತಿಯು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಸಂಘರ್ಷ ಸೇನೆಯ ಸಂಸ್ಥಾಪಕ ಅಧ್ಯಕ್ಷ ಎ. ಗೋಪಾಲ್ ರವರು ವಹಿಸಿದ್ದರು. ಪ್ರತಿಭಟನೆಯಲ್ಲಿ ಆರ್.ಪಿ.ಐ,ನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಆರ್.ಚಂದ್ರಶೇಖರ್. ಹೋರಾಟಗಾರರಾದ ವೆಂಕಿ, ಕೇಶವನ್, ಬ್ಯಾಟರಾಜ್, ರವಿಕುಮಾರ್, ಪೀಟರ್, ಆನೇಕಲ್ ರಾಜಪ್ಪ, ಮುನಿರಾಜು, ಬಿಂಗೀಪುರ ಮಂಜು, ಸೋಮಶೇಖರ್, ಶೀನಪ್ಪ, ರಮಾದೇವಿ, ಸರಳಾ, ನಾಗರತ್ಮ, ಸಲ್ಮಾ, ಸುಧಾ, ಚಲಘಟ್ಟ ಮುನಿರಾಜು, ನಾಗೇಶ್, ಗೋಪಾಲ್, ಕೆಂಚೆಯ್ಯ, ಮರಿಯಪ್ಪ ಮತ್ತು ಬೀದಿ ಬದಿ ವ್ಯಾಪಾರಿಗಳು ಭಾಗವಹಿಸಿದ್ದರು.