
ಅಥಣಿ :ಆ.6: ತಾಲೂಕಿನ ದರೂರ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ತಾಲೂಕಿನ ವಲಯ ಮಟ್ಟದ ಪ್ರೌಢ ಶಾಲೆಗಳ ಬಾಲಕಿಯರ ಪಂದ್ಯಾಟಗಳು ಇಂದು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದವು.
ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪ್ರೌಢಶಾಲಾ ವಿಭಾಗದ ಬಾಲಕಿಯರ ಥ್ರೋಬಾಲ್ ತಂಡವು ಕ್ರೀಡಾಕೂಟದಲ್ಲಿ ಭಾಗವಹಿಸಿ “ಪ್ರಥಮ ಸ್ಥಾನ” ಪಡೆದರು.
ಭಲ್ಲೆ ಎಸೆತದಲ್ಲಿ ಸ್ನೇಹಾ ಬಾಹುಬಲಿ ಸಂಕ್ರಟ್ಟಿ ಪ್ರಥಮ ಸ್ಥಾನ, ಸ್ಕಿಪ್ಪಿಂಗ್ ದಲ್ಲಿ ಸಾಕ್ಷಿ ಪ್ರಕಾಶ ಆಲಗೂರ, ಪ್ರಥಮ ಸ್ಥಾನ, ಹಾಗೂ ಭಲ್ಲೆ ಎಸೆತದಲ್ಲಿ ವತ್ಸನಾ ಹಸನ ನದಾಫ ತೃತೀಯ ಸ್ಥಾನ ಪಡೆದರು.
ಸುರೇಶ ಸವದಿಯವರ ನೇತೃತ್ವದ ತಂಡಕ್ಕೆ ಶಿಕ್ಷಕಿ ರಾಜಶ್ರೀ ಲಾಳಿ ತಂಡದ ವ್ಯವಸ್ಥಾಪಕರಾಗಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತ ಹಳ್ಳೂರ ತಂಡಕ್ಕೆ ತರಬೇತಿ ನೀಡಿದ್ದಾರೆ.
ವಿಜೇತ ತಂಡಕ್ಕೆ ಹಾಗೂ ತಂಡದ ಸಂಯೋಜಕರಿಗೆ ಸಂಸ್ಥೆಯ ಮುಖ್ಯಸ್ಥ ಡಿ.ಬಿ.ನದಾಫ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಮುಕುಂದ ತೀರ್ಥ ಮತ್ತು ಆಡಳಿತ ಮಂಡಳಿಯವರು, ಶಾರದಾ ಶಾಲೆಯ ಹಿರಿಯ ವಿದ್ಯಾರ್ಥಿಗಳು, ಸಮಸ್ತ ಗ್ರಾಮಸ್ಥರು ಹಾಗೂ ಎಲ್ಲ ಸಿಬ್ಬಂದಿಯವರು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.