ವಲಯ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ


ಮುನವಳ್ಳಿ,ಆ.26: ಸಮಿಪದ ಉಜ್ಜಿನಕೊಪ್ಪ ಗ್ರಾಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯವರಿಂದ 2023-24 ನೇ ಸಾಲಿನ ಕಟಕೋಳ ಹಾಗೂ ಹಣಮಸಾಗರ ವಲಯ ಮಟ್ಟದ ಕ್ರೀಡಾಕೂಟ ಜರುಗಿತು.
ಶಾಲೆಯ ಪ್ರಧಾನ ಗುರುಗಳಾದ ಜಿ,ಎಮ್.ಹುಲ್ಲುರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು ವಿದ್ಯಾರ್ಥಿಗಳು ತಮ್ಮ ಇಷ್ಟಾರ್ಥ ಕ್ರೀಡೆಯಲ್ಲಿ ನಿರಂತರ ಪರಿಶ್ರಮ ವಹಿಸಿ ತರಬೇತಿ ಪಡೆದುಕೊಂಡಲ್ಲಿ ಮಾತ್ರ ತಾಲೂಕು ಜಿಲ್ಲಾ ಮಟ್ಟಗಳಿಗೆ ಆಯ್ಕೆಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಲು ಸಾಧ್ಯವಿದೆ ಆ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ನಿಯಮ ಪಾಲನೆಯೊಂದಿಗೆ ಕ್ರೀಡಾ ಮನೋಭಾವನೆಯಿಂದ ವಿದ್ಯಾರ್ಥಿಗಳು ಪ್ರತಿಯೊಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ ಎಂದರು. ಎಸ್.ಡಿ.ಎಮ್.ಸಿ ಅಧ್ಯಕ್ಷ ಗದಿಗೆಪ್ಪ ಟೇನಗಿ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಬಾಳಪ್ಪ ರಡ್ರಟ್ಟಿ, ಸಿ.ಆರ್.ಪಿಗಳಾದ ಪಿ.ಬಿ ಜಟಗನ್ನವರ, ಎಸ್.ವಿ.ದಿವಟಗಿ, ಆಗಮಿಸಿದ್ದರು. ಎಸ್,ಡಿ.ಎಮ್ ಸಿ ಸದಸ್ಯರು, ದೈಹಿಕ ಶಿಕ್ಷಕರು ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.