
ಮುನವಳ್ಳಿ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟವನ್ನು ಯುವ ದುರೀಣ ಅಶ್ವತ್ಥ ವೈದ್ಯ ಉದ್ಘಾಟಿಸಿ ಮಾತನಾಡಿ ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದ್ದು ಗುರು ಎಲ್ಲ ರೀತಿಯ ವಿದ್ಯೆಗಳನ್ನು ಮಕ್ಕಳಿಗೆ ಧಾರೆ ಎರೆಯುತ್ತಾನೆ, ವಿದ್ಯಾರ್ಥಿಗಳಿಗೆ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಂಡದ ಆಟಗಾರರ ಪಾತ್ರವನ್ನು ಹಾಗೂ ನಾಯಕತ್ವ ಪಾತ್ರವನ್ನು ಅವರವರ ಅನುಭವದ ಮೇಲೆ ನಿರ್ವಹಿಸುತ್ತಾರೆ. ಇಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ ಎಂದರು.
ಸಾನಿಧ್ಯ ವಹಿಸಿದ ಸೋಮಶೇಖರ ಮಠದ ಮುರುಘೇಂದ್ರ ಶ್ರೀಗಳು ಆಶೀರ್ವಚನದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಾಳ್ಮೆ, ತಂಡದ ಸಾಂಘಿಕ ಪ್ರಯತ್ನ. ಒಗ್ಗಟ್ಟು, ಸಾಮಾಜಿಕ ಕೌಶಲ್ಯಗಳು ಬೆಳೆಯುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಮಾನಸಿಕ ಜಾಗರೂಕತೆ ಮತ್ತು ಸ್ವಾಭಿಮಾನ ಗುಣಗಳು ಬೆಳೆಯುತ್ತವೆ. ಮಕ್ಕಳು ಕ್ರಿಕೇಟ ಆಟವಷ್ಟೆ ಅವಲಂಬಿಸದೆ ಎಲ್ಲ ಆಟಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡಿ “ಕ್ರೀಡೆಗಳಲ್ಲಿ ಭಾಗವಹಿಸಿದ ಮಕ್ಕಳು ಸಕಾರಾತ್ಮಕ ರೀತಿಯಲ್ಲಿ ಪಾಲ್ಗೊಳ್ಳಬೇಕು. ಇಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ, ನಿರ್ಣಾಯಕರು ಕೂಡ ನಿಷ್ಪಕ್ಷಪಾತವಾಗಿ ನಿರ್ಣಯ ನೀಡುವ ಮೂಲಕ ಉತ್ತಮ ಪ್ರತಿಭೆಗಳು ಹೊರಹೊಮ್ಮುವಂತೆ ಮಾಡಿರಿ”ಎಂದರು.
ರವೀಂದ್ರ ಯಲಿಗಾರ ಕ್ರೀಡಾಧ್ವಜ ಹಾಗೂ ಕ್ರೀಡಾಜ್ಯೋತಿಗೆ ಚಾಲನೆ ನೀಡಿದರು, ಬಿ.ಎನ್.ಬ್ಯಾಳಿ, ಎಂ.ಡಿ.ಹುದ್ದಾರ, ಚಂದ್ರು ಜಂಬ್ರಿ, ವೀರೇಶ ಬ್ಯಾಹಟ್ಟಿ, ತಾಜಾಜಿರಾವ್ ಮುರಂಕರ, ಶ್ರೀಶೈಲ ಉಜ್ಜಿನಕೊಪ್ಪ, ಭವಾನಿ ಖೊಂದುನಾಯ್ಕ, ವೈ.ಬಿ.ಕಡಕೋಳ, ಎಂ.ಎಸ್.ಹೊಂಗಲ. ಈರಣ್ಣ ಕಿತ್ತೂರ, ಗುರುನಾಥ ಪತ್ತಾರ, ಎಂ.ಜಿ.ಪರಸಪ್ಪನವರ, ಮೋಹನ ಕಾಮನ್ನವರ, ಎನ್.ಬಿ.ಪೆಂಟೇದ, ಜಿ,ಎಸ್,ಚಿಪ್ಪಲಕಟ್ಟಿ, ಎನ್.ಎ.ಹೊನ್ನಳ್ಳಿ, ಮೀರಾ ಮುರನಾಳ, ಇತರರು ಉಪಸ್ಥಿತರಿದ್ದರು.