ವಲಯ ಮಟ್ಟದ ಕ್ರೀಡಾಕೂಟ, ಸಪ್ತಸಾಗರದ ಶಾರದಾ ಶಾಲೆ ಕಬಡ್ಡಿಯಲ್ಲಿ ಪ್ರಥಮ ಸ್ಥಾನ

ಅಥಣಿ : ಸೆ.3:ತಾಲೂಕಿನ ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಹಿರಿಯ ಪ್ರಾಥಮಿಕ ಶಾಲೆಯ ಗಂಡು ಮಕ್ಕಳ ವಿಭಾಗದ ಕಬಡ್ಡಿ ತಂಡವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಹಾಗೂ ಸಪ್ತಸಾಗರ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಥಣಿ ಹಾಗೂ ಸರಕಾರಿ ಪ್ರಾಥಮಿಕ ಶಾಲೆ, ಭಡಕಂಬಿ ತೋಟ ಇವರ ಸಹಯೋಗದಲ್ಲಿ ಶಂಕರಹಟ್ಟಿ ವಲಯ ಮಟ್ಟದ ಕ್ರೀಡಾಕೂಟ ಅಥಣಿ ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿತು.
ಸಂಸ್ಥೆಯಿಂದ ವತಿಯಿಂದ ಸುರೇಶ ಸವದಿಯವರ ನೇತೃತ್ವದಲ್ಲಿ ರಚನೆಯಾದ ತಂಡಕ್ಕೆ ದೈಹಿಕ ಶಿಕ್ಷಕ ಪ್ರಶಾಂತ ಹಳ್ಳೂರ ತರಬೇತಿ ನೀಡಿದ್ದರು ಹಾಗೂ ಎಸ್.ಎಂ.ಪಾಲಬಾವಿಯವರು ತಂಡದ ವ್ಯವಸ್ಥಾಪಕರಾಗಿದ್ದರು.
ವಿಜೇತ ತಂಡಕ್ಕೆ ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಕ್ರೀಡಾಪಟುಗಳಿಗೆ ಸಂಸ್ಥೆಯ ಮುಖ್ಯಸ್ಥರಾದ ಡಿ.ಬಿ.ನದಾಫ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯ ಶಿಕ್ಷಕ ಮುಕುಂದ ತೀರ್ಥ ಹಾಗೂ ಆಡಳಿತ ಮಂಡಳಿ, ಎಲ್ಲ ಸಿಬ್ಬಂದಿಯವರು, ಶಾರದಾ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಸಮಸ್ತ ಪಾಲಕ ಬಂಧುಗಳು ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ