ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಜು.31: ತಾಲ್ಲೂಕಿನ ಅರಸೀಕೆರೆ ವಲಯ ಮಟ್ಟದ ಕ್ರೀಡಾಕೂಟ ಸಮಾರೋಪ ಸಮಾರಂಭ ಈಚೆಗೆ ಜ್ಞಾನ ಜ್ಯೋತಿ ಶಾಲೆ ಆವರಣದಲ್ಲಿ ನೆರವೇರಿತು. ಕ್ರೀಡಾಕೂಟದಲ್ಲಿ 8 ಗ್ರಾಮಗಳ 12 ಶಾಲೆಗಳು ಭಾಗವಹಿಸಿದ್ದವು. ಸರ್ಕಾರಿ ಮಾದರಿ ಶಾಲೆಗೆ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.
ಬಾಲಕರ ವಿಭಾಗ ಕಬ್ಬಡ್ಡಿ ಪ್ರಥಮ-ಅರಸೀಕೆರೆ ಸರ್ಕಾರಿ ಮಾದರಿ ಶಾಲೆ, ದ್ವಿತೀಯ– ಶಾಂತ ಪ್ರಕಾಶ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕೊಕ್ಕೊ ಪ್ರಥಮ– ಕಮ್ಮತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ– ಅರಸೀಕೆರೆ ಜ್ಞಾನ ಜ್ಯೋತಿ ಶಾಲೆ. ವಾಲಿಬಾಲ್ ಪ್ರಥಮ– ಕಮ್ಮತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ– ಅರಸೀಕೆರೆ ಸರ್ಕಾರಿ ಮಾದರಿ ಶಾಲೆ ದ್ವಿತೀಯ. ಥ್ರೋ ಬಾಲ್: ಶಾಂತ ಪ್ರಕಾಶ ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ– ಪ್ರಥಮ, ಅರಸೀಕೆರೆ ಜ್ಞಾನ ಜ್ಯೋತಿ ಶಾಲೆ– ದ್ವಿತೀಯ. ಬಾಲಕಿಯರ ವಿಭಾಗ: ಕಬ್ಬಡ್ಡಿ: ಅರಸೀಕೆರೆ ಸರ್ಕಾರಿ ಮಾದರಿ ಶಾಲೆ– ಪ್ರಥಮ, ತವಡೂರು ತಾಂಡ ಸರ್ಕಾರಿ ಪ್ರಾಥಮಿಕ ಶಾಲೆ– ದ್ವಿತೀಯ. ಕೊಕ್ಕೊ: ಜ್ಞಾನ ಜ್ಯೋತಿ ಶಾಲೆ– ಪ್ರಥಮ, ಶಾಂತ ಪ್ರಕಾಶ ನಗರ ಶಾಲೆ– ದ್ವಿತೀಯ. ವಾಲಿಬಾಲ್ ಅರಸೀಕೆರೆ ಸರ್ಕಾರಿ ಮಾದರಿ ಶಾಲೆ– ಪ್ರಥಮ, ತವಡೂರು ತಾಂಡ ಸರ್ಕಾರಿ ಪ್ರಾಥಮಿಕ ಶಾಲೆ– ದ್ವಿತೀಯ. ಥ್ರೋ ಬಾಲ್: ಅರಸೀಕೆರೆ ಸರ್ಕಾರಿ ಮಾದರಿ ಶಾಲೆ– ಪ್ರಥಮ, ಕಮ್ಮತ್ತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ– ದ್ವಿತೀಯ. ಓಟದ ಸ್ಪರ್ಧೆ: 100 ಮೀ: ಕೆಂಚಪ್ಪ– ಪ್ರಥಮ, ಮಹೇಶ್ ಗೌಡ– ದ್ವಿತೀಯ, ಎಚ್.ತನು– ಪ್ರಥಮ, ಪಿ. ರೇಖಾ– ದ್ವಿತೀಯ. 200 ಮೀ ನಾಗರಾಜ– ಪ್ರಥಮ, ಕೊಲ್ಲಪ್ಪ– ದ್ವಿತೀಯ, ತನು– ಪ್ರಥಮ, ತನುಬಾಯಿ–ದ್ವಿತೀಯ, 400 ಮೀ; ರಮೇಶ್– ಪ್ರಥಮ, ಕೊಲ್ಲಪ್ಪ, ದ್ವಿತೀಯ, ತನುಬಾಯಿ– ಪ್ರಥಮ, ಶಿಲ್ಪ– ದ್ವಿತೀಯ. ರಿಲೇ: ಪವನ್ ಕುಮಾರ್– ಪ್ರಥಮ, ವಿಷ್ಣು– ದ್ವಿತೀಯ, ರೇಖಾ– ಪ್ರಥಮ, ನಂದಿನಿ– ದ್ವಿತೀಯ. ಗುಂಡು ಎಸೆತ: ಪವನ– ಪ್ರಥಮ, ಪೃಥ್ವಿರಾಜ– ದ್ವಿತೀಯ, ಶ್ವೇತಾ– ಪ್ರಥಮ, ಅನುಷ– ದ್ವಿತೀಯ ಚಕ್ರ ಎಸೆತ ಪಲ್ಲವಿ– ಪ್ರಥಮ, ಸುಕನ್ಯಾ– ದ್ವಿತೀಯ.
ಕ್ರೀಡಾಕೂಟವನ್ನು ತೌಡೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶೆಟ್ಟಿನಾಯ್ಕ, ಅರಸೀಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಖಾ ಕೊಟ್ರೇಶ್ ಉದ್ಘಾಟಿಸಿದ್ದರು. ವಲಯ ಸಂಪನ್ಮೂಲ ವ್ಯಕ್ತಿ ಸಿದ್ಧಲಿಂಗನ ಗೌಡ, ಶಿಕ್ಷಕರಾದ ಅರ್ಜುನ್ ಪರಸಪ್ಪ, ಹಾಲೇಶ್, ಕೆಂಪಣ್ಣ ಮುಖಂಡರಾದ ವೈ.ಡಿ ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಮಂಜನಾಯ್ಕ, ಹುಸೇನ್ ನಾಯ್ಕ ಇದ್ದರು

Attachments area