ವಲಯ ಮಟ್ಟದ ಕ್ರೀಡಾಕೂಟ:ತಾಲೂಕು ಮಟ್ಟಕ್ಕೆ ಮಹೇಂದ್ರ ಆಯ್ಕೆ

ರಾಯಚೂರು. ಜು.೨೩- ನಗರದ ಆಶಾಪೂರು ರಸ್ತೆಯಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಯ ಮೈದಾನದಲ್ಲಿ ಕಲ್ಮಲಾ ವಲಯ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.ಈ ಕ್ರೀಡಾಕೂಟದಲ್ಲಿ
ಹುಣಸಿಹಾಳ್ ಹುಡಾ ಗ್ರಾಮದ ಶಾಲೆಯ ಐದನೆಯ ತರಗತಿ ವಿದ್ಯಾರ್ಥಿಯಾದ ಮಹೇಂದ್ರ ಬಾಲಕರ ವಿಭಾಗದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾನೆ. ಹಾಗೂ ಬಾಲಕಿಯರ ವಿಭಾಗದ ಕಬ್ಬಡ್ಡಿ ಪಂದ್ಯದಲ್ಲಿ ದ್ವಿತೀಯಸ್ಥಾನ ಪಡೆಯುವ ಮೂಲಕ ಶಾಲೆಯ ವಿದ್ಯಾರ್ಥಿಗಳು ಊರಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಟೀಮ್ ಮ್ಯಾನೇಜರ್ ಹಾಗೂ ಸಹ ಶಿಕ್ಷಕರಾದ ಮೇನಕಾ ಮತ್ತು ಸುನೀತಾ ಇವರಿಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ,ಸದಸ್ಯರು,ಹಾಗೂ ಶಾಲಾ ಮುಖ್ಯೋಪಾಧ್ಯಾಯರು,ಸಿಬ್ಬಂದಿ ವರ್ಗ ಗ್ರಾಮಸ್ಥರು ಶುಭ ಹಾರೈಸಿದ್ದಾರೆ
ಎಂದು ಪ್ರಭಾರಿ ಮುಖ್ಯೋಪಾಧ್ಯಾಯರಾದ ಆರ್.ಪ್ರದೀಪ್ ಕುಮಾರ್ ತಿಳಿಸಿದ್ದಾರೆ.