ವಲಯ ಅರಣ್ಯಾಧಿಕಾರಿ ಪುತ್ರಿಗೆ ಸಿಬಿಎಸ್ ಇ ಯಲ್ಲಿ ಶೇ. 86 ಅಂಕ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 20 :-  ತಾಲೂಕಿನ ಗುಡೇಕೋಟೆ ವಲಯ ಅರಣ್ಯಾಧಿಕಾರಿ ರೇಣುಕಾ ಮಲ್ಲಪ್ಪ  ಅವರ ಪುತ್ರಿ ಲಾವಣ್ಯ ಕೆ.ಎಂ ಅವರು ಸಿಬಿಎಸ್ ಇ ಪಠ್ಯಕ್ರಮದ 10 ನೇ ತರಗತಿಯಲ್ಲಿ ಶೇ.86 ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ‌ ಮಾಡಿದ್ದಾರೆ.
ವಲಯ ಅರಣ್ಯಾಧಿಕಾಧಿಕಾರಿಗಳಾಗಿರುವ ರೇಣುಕಾ ಮತ್ತು ಮಲ್ಲಪ್ಪ ದಂಪತಿಯ ಪುತ್ರಿ ಲಾವಣ್ಯ ಕೆ.ಎಂ ಅವರು ಸಂಡೂರಿನ ಬಿಕೆಜಿ ಗ್ಲೋಬಲ್ ಶಾಲೆಯಲ್ಲಿ ಸಿಬಿಎಸ್ ಇ ಪಠ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಈ ಬಾರಿ ಉತ್ತಮ ಫಲಿತಾಂಶದೊಂದಿಗೆ ಆ ಶಾಲೆಗೆ ದ್ವಿತೀಯ ಸ್ಥಾನ ಪಡೆದು ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿನಿ ಲಾವಣ್ಯ ಸಾಧನೆಗೆ  ಶಾಲೆಯ ಶಿಕ್ಷಕರು, ಪಾಲಕರು ಹಾಗೂ ಕರುನಾಡು ಸಂಸ್ಥೆಯ ಅಧ್ಯಕ್ಷೆ ಹುಡೇಂ ಕವಿತಾ ಕೃಷ್ಣಮೂರ್ತಿ, ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಭೀಮಣ್ಣ ಗಜಾಪುರ, ಪತ್ರಕರ್ತರಾದ ಹುಡೇಂ ಕೃಷ್ಣಮೂರ್ತಿ, ಕೂಡ್ಲಿಗಿ ನಾಗರಾಜ ಭರಮಪ್ಪನವರ್, ಹುಲಿಕೆರೆ ದಯಾನಂದ ಸಜ್ಜನ್, ಭೀಮಸಮುದ್ರ ರಂಗನಾಥ, ಬಿ.ಟಿ.ಗುದ್ದಿ ಅಜಯ್ ಸೇರಿ ಲಾವಣ್ಯ ಅವರ ಬಂಧುಗಳು ಸಂತಸ ವ್ಯಕ್ತಪಡಿಸಿದ್ದಾರೆ.