ವರ್ಷಾಂತ್ಯಕ್ಕೆ ವೀರಶೈವ ಮಹಾಸಭೆ ಎಲ್ಲ ಜಿಲ್ಲೆಗಳಿಗೆ ಚುನಾವಣೆ ನಡೆಸುವ ಗುರಿ: ರೇಣುಕಾ ಪ್ರಸನ್ನ ಪ್ರಕಟ

ಯಾದಗಿರಿ;ನ.5; ಕರ್ನಾಟಕ ರಾಜ್ಯದಲ್ಲಿ 12 ಜಿಲ್ಲೆಗಳಿಗೆ ಮತ್ತು 106 ತಾಲೂಕ ಘಟಕಗಳಿಗೆ ಚುನಾವಣೆ ನಡೆದಿದ್ದು ಬಾಕಿ ಉಳಿದ ಜಿಲ್ಲೆ ಮತ್ತು ತಾಲೂಕುಗಳಿಗೆ ಚುನಾವಣೆ ನಿಯಮಗಳ ಪ್ರಕಾರ ಅರ್ಹತೆ ಪಡೆದ ಜಿಲ್ಲೆ ಮತ್ತು ತಾಲೂಕುಗಳಿಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣಾಧಿಕಾರಿಯೂ ಆಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್. ರೇಣುಕಾ ಪ್ರಸನ್ನ ಪ್ರಕಟಿಸಿದರು.
ನಗರದ ಎನ್.ವಿ.ಎಂ. ಹೊಟೇಲ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣೆಯಾಗದೇ ಈಗ ಅರ್ಹತೆ ಪಡೆದಿರುವ / ಪಡೆಯಲಿರುವ ರಾಜ್ಯ ಜಿಲ್ಲಾ ಮತ್ತು ತಾಲೂಕ ಘಟಕಗಳಿಗೆ ಡಿಸೆಂಬರ್ 27. ರಂದು ಚುನಾವಣೆ ನಡೆಯಲಿದೆ. ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಮಹಾಸಭಾ ಸದಸ್ಯರಾಗಲು ಇದೇ ತಿಂಗಳ 10 ಕೊನೆಯ ದಿನಾಂಕವಾಗಿದೆ ಮತ್ತು ಅಂತಿಮ ಮತದಾರರ ಪಟ್ಟಿಯನ್ನು ತಿಂಗಳ ಕೊನೆಯ ಅಂದರೆ ನವೆಂಬರ್ 30 ಕ್ಕೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ನಿಯಮಗಳ ಪ್ರಕಾರ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಯಬೇಕಾದರೆ ಕನಿಷ್ಠ 1000 (ಆಶ್ರಯದಾತ ರೂ.1000.) ಹಾಗೂ ಸದಸ್ಯರಾಗಿರಬೇಕು. ತಾಲೂಕು ಘಟಕಗಳಿಗೆ ಚುನಾವಣೆ ನಡೆಯಬೇಕಾದರೆ ಎಲ್ಲಾ ವರ್ಗಗಳ ಕನಿಷ್ಠ 300 ಸದಸ್ಯರು ಇರಬೇಕು.
ಯಾದಗಿರಿ ಜಿಲ್ಲಾ ಘಟಕದಲ್ಲಿ 569 ಮತದಾರರ ಸದಸ್ಯರಿದ್ದು , ಇನ್ನು 431 ಸದಸ್ಯರುಗಳು ನೊಂದಣಿ ಯಾದರೆ ಜಿಲ್ಲಾ ಘಟಕವು ಚುನಾವಣೆಗೆ ಅರ್ಹತೆ ಪಡೆಯಲಿದೆ. ಅದೇ ರೀತಿ ಸುರಪುರ ತಾಲೂಕಿನಲ್ಲಿ ಕೇವಲ 10 ಸದಸ್ಯರಿದ್ದು, ತಾಲ್ಲೂಕು ಸಮಿತಿಗೆ ಇರಬೇಕಾದ ಕನಿಷ್ಟ ಸದಸ್ಯರ ಸಂಖ್ಯೆ 290 ಇರಬೇಕು ಅಂದರೆ ಚುನಾವಣೆ ನಡೆಸಲು ಬರುತ್ತದೆ ಎಂದು ಅವರು ತಿಳಿಸಿದರು.
ಅವಶ್ಯಕ ಸದಸ್ಯರುಗಳು ನೊಂದಣಿ ಯಾದರೆ ಯಾದಗಿರಿ ಜಿಲ್ಲಾ ಹಾಗೂ ಸುರಪುರ ತಾಲೂಕ ಘಟಕಕ್ಕೆ ಮೇಲಿನ ಚುನಾವಣಾ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ ಎಂದೂ ಅವರು ಒತ್ತಿ ಹೇಳಿದರು.
ಚುನಾವಣಾ ವೇಳಾಪಟ್ಟಿ ಪ್ರಕಾರ ದಿನಾಂಕ 10.11.2020 ರ ವರೆಗೆ ಸದಸ್ಯರಾಗಲು ಅವಕಾಶವಿದ್ದು, ಈಗ ಸದಸ್ಯರಾಗುವವರಿಗೆ ಚುನಾವಣೆಯಲ್ಲಿ ಸ್ಪರ್ದಿಸಲು ಹಾಗೂ ಮತದಾನದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ರಾಜ್ಯ ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರುಗಳು ಈ ವಿಷಯವನ್ನು ಇನ್ನು ಸದಸ್ಯರಾಗದೇ ಇರುವ ಸಮಾಜ ಬಾಂಧವರಿಗೆ ಸದಸ್ಯರಾಗುವಂತೆ ಪ್ರೇರೇಪಿಸಬೇಕು. ಈ ಅವಕಾಶವನ್ನು ಉಪಯೋಗಿಸಿಕೊಳ್ಳುವಂತೆ ತಮ್ಮ ಮಾಧ್ಯಮದ ಮೂಲಕ ಸಮಾಜದ ಬಾಂಧವರಲ್ಲಿ ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರೂ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅವಿನಾಶ ಜಗನ್ನಾಥ, ತಾಲ್ಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು ಇದ್ದರು.