ವರ್ಷಧಾರೆ : ವಿಮಾನ ಹಾರಾಟ ವಿಳಂಬ

ಬೆಂಗಳೂರು,ಸೆ.೬- ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ವಿಮಾನ ಹಾರಾಟಕ್ಕೂ ವ್ಯತ್ಯಯವಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಾಗಿದ್ದ ೯ ವಿಮಾನಗಳು ವಿಳಂಬವಾಗಿವೆ.
ನಗರಕ್ಕೆ ಬರುತ್ತಿದ್ದ ೬ ವಿಮಾನಗಳಲ್ಲಿ ಚೆನ್ನೈ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ವಕ್ತಾರರು ತಿಳಿಸಿದ್ದಾರೆ.
ದೆಹಲಿ, ಮುಂಬೈ ಮತ್ತು ಪುಣೆಯಿಂದ ಇಂಡಿಗೊ ಹಾಗೂ ಗೋಸ್ಪರ್ಶ್‌ನ ೪ ದೇಸೀಯ ವಿಮಾನಗಳ ಮಾರ್ಗವನ್ನು ಬದಲಿಸಲಾಗಿದೆ. ಇದರಿಂದಾಗಿ ೬ ಅಂತಾರಾಷ್ಟ್ರೀಯ ವಿಮಾನ ಸೇರಿದಂತೆ ಒಟ್ಟು ೯ ವಿಮಾನಗಳು ವಿಳಂಬವಾಗಿದೆ.
ವಿಮಾನನಿಲ್ದಾಣದಲ್ಲಿ ಬೆಳಗಿನಜಾವ ೪ ಗಂಟೆವರೆಗೆ ೧೦೯ ಮಿ.ಮೀ ಮಳೆಯಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ನಿರ್ಗಮನ ವಿಳಂಬವಾಗಿವೆ.
ಪುಣೆ ಮತ್ತು ಅಹಮದಾಬಾದ್‌ಗೆ ೩ ದೇಸೀಯ ವಿಮಾನಗಳು ವಿಳಂಬವಾಗಿದೆ. ಟರ್ಮಿನಲ್ ಒಳಭಾಗದಲ್ಲಿರುವ ವಆಹನ ನಿಲುಗಡೆ ಪ್ರದೇಶಗಳಲ್ಲಿ ಮಳೆ ನೀರು ನಿಂತಿರುವ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟರ್ಮಿನಲ್ ಪ್ರದೇಶದ ಸಮೀಪವಿರುವ ಪಾರ್ಕಿಂಗ್ ಸ್ಥಳ ನೀರಿನಲ್ಲಿ ಮುಳುಗಿ ಹೋಗಿದೆ.