ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ,ಮಾ 29: ಕೊರೊನಾ ಕಠಿಣ ಸಂದರ್ಭದಲ್ಲಿ ಪ್ರತಿಯೊಬ್ಬರು ಸವಾಲಿನ ಕೆಲಸ ಮಾಡಿ ಕೊರೋನಾ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದು ಹೆಮ್ಮೆ ಎನಿಸುತ್ತದೆ ಎಂದು ಧಾರವಾಡ ಎಸ್‍ಡಿಎಂ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನಕುಮಾರ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಕಾಟನ್ ಕೌಂಟಿ ಕ್ಲಬ್‍ನಲ್ಲಿ ರವಿವಾರ ರಾತ್ರಿ ನಡೆದ ಸಮಾರಂಭದಲ್ಲಿ ರೋಟರಿ ಕ್ಲನ್ ಆಫ್ ಹುಬ್ಬಳ್ಳಿ ಮಿಡ್‍ಟೌನ್ ವತಿಯಿಂದ ವರ್ಷದ ವ್ಯಕ್ತಿ-2021 ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿನ ಕಾರ್ಯ ಪರಿಗಣಿಸಿ, ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಸಂತಸ ತಂದಿದೆ. ನಮ್ಮ ಸಿಬ್ಬಂದಿ ವರ್ಗದವರ ಸಹಕಾರಕ್ಕೆ ಒಲಿದಿದೆ ಎಂದರು. ಜಿಲ್ಲಾ ಗವರ್ನರ್ ಸಂಗ್ರಾಮ ಪಾಟೀಲ ಮಾತನಾಡಿದರು. ಅಸಿಸ್ಟಂಟ್ ಗೌವರ್ನರ್ ಪ್ರವೀಣ ಹೆಬಸೂರ, ಅಧ್ಯಕ್ಷೆ ಕೌಸ್ತುಬಾ ಸಂಶೀಕರ್, ಕಾರ್ಯದಶಿ ಅನೀಸ್ ಖೋಜೆ, ಉತ್ಕರ್ಷ ಪಾಟೀಲ, ಖಜಾಂಚಿ ದಿನೇಶ್ ಶೆಟ್ಟಿ ಸೇರಿದಂತೆ ಇತರರು ಇದ್ದರು. ಇದಕ್ಕೂ ಮೊದಲು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.