ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಆಯ್ಕೆ

ದಾವಣಗೆರೆ.ನ.೧೮: ನಗರದ ‘ಜಿಲ್ಲೆ ಸಮಾಚಾರ’ ದಿನಪತ್ರಿಕಾ ಬಳಗವು ಸಾದರಪಡಿಸುತ್ತಿರುವ ‘ವರ್ಷದ ವ್ಯಕ್ತಿ’ ಪ್ರಶಸ್ತಿ ಪುರಸ್ಕಾರದ ನಿರಂತರತೆಗೆ ಈಗ ಹದಿನೆಂಟನೇ ವರ್ಷದ ಸಂಭ್ರಮ. ಪ್ರತಿಬಾರಿಯೂ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ಗುರ್ತಿಸಿ, ಗೌರವಿಸುವ ವಿಶಿಷ್ಟತಯನ್ನು ಕಾಯ್ದುಕೊಳ್ಳಲಾಗಿದೆ. ಅದರಂತೆ  2022ರ ಸಾಲಿಗೆ ಸಾಮಾಜಿಕ ಸೇವಾ ಧುರೀಣರೂ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿರುವ ಜನಪ್ರಿಯ ಶಾಸಕರೂ ಆಗಿರುವ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಪತ್ರಿಕಾ ಬಳಗವು ಒಮ್ಮತದ ಒಪ್ಪಿಗೆಯನ್ನು ವ್ಯಕ್ತಪಡಿಸಿದೆ ಎಂದು ಬಳಗದ ಅಧ್ಯಕ್ಷರಾದ ಶ್ರೀಮತಿ ಸತ್ಯಭಾಮ ಮಂಜುನಾಥ್ ತಿಳಿಸಿದ್ದಾರೆ.