ವರ್ಷದ ವಿದ್ಯಾರ್ಥಿ’ ಗೌರವ


ಬಾಗಲಕೋಟೆ,ಏ.18 : ಬಿ.ವಿ.ವಿ.ಸಂಘದ ಪಿ.ಎಮ್.ಎನ್.ಎಮ್ ದಂತ ಕಾಲೇಜಿನ ದಂತ ರಕ್ಷಣಾ ವಿಭಾಗದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿನಿಯರು 2021 ನೇ ಸಾಲಿನಲ್ಲಿ ಅಖಿಲ ಭಾರತ ಕೃತಕ ದಂತ ರಕ್ಷಣಾ ಸೊಸಾಯಿಟಿ ಆಯೋಜಿಸಿದ್ದವರ್ಷದ ವಿದ್ಯಾರ್ಥಿ ಸ್ಪರ್ಧೆ’ಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುವರು. ಆನ್‍ಲೈನ್ ಮೂಲಕ ಆಯೋಜಿಸಿದ್ದ ಭಾರತ ಮಟ್ಟದ ಸ್ಪರ್ಧೆಯಲ್ಲಿ ಕಾಲೇಜಿನ ಡಾ.ಅಪರಾಜಿತಾ ಲಾಲ್ 5ನೇ ರ್ಯಾಂಕ್ ಮತ್ತು ಡಾ.ದನವೀರಾ ರೌತ್ ದೇಸಾಯಿ 9ನೇ ರ್ಯಾಂಕ್ ಪಡೆದು ವರ್ಷದ ವಿದ್ಯಾರ್ಥಿ ಗೌರವಕ್ಕೆ ಪಾತ್ರರಾಗಿರುವರು. ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿನ ಬೋಧಕರಾದ ಡಾ.ರವಿರಾಜ ದೇಸಾಯಿ, ಡಾ.ವಿಕಾಸ ಕಾಂಬಳೆ ಮತ್ತು ಡಾ.ಕಾಶಿನಾಥ ಆರಬ್ಬಿ ಮಾರ್ಗದರ್ಶನ ಮಾಡಿರುವರು.
ವಿದ್ಯಾರ್ಥಿಯರ ಈ ಸಾಧನೆಗೆ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಮತ್ತು ಶಾಸಕ ಡಾ.ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ (ಬೇವೂರ), ಪ್ರಾಚಾರ್ಯ ಡಾ.ಶ್ರೀನಿವಾಸ ವನಕಿ ಮತ್ತು ಕೃತಕ ದಂತ ರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ರವಿರಾಜ ದೇಸಾಯಿ ಅಭಿನಂದಿಸಿದ್ದಾರೆ.